ನೋಯ್ಡಾ: ಕ್ರಿಕೆಟ್ ಪಂದ್ಯದ ವೇಳೆ ಉಂಟಾದ ಗಲಾಟೆಯಲ್ಲಿ ಮೂವರು ಯುವಕರು ಸೇರಿಕೊಂಡು ಮತ್ತೊಬ್ಬ ಯುವಕನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾ ಬಳಿ ಭಾನುವಾರ ಸಂಜೆ ನಡೆದಿದೆ.

ಕೊಲೆಯಾದ ಯುವಕನನ್ನು ಮೀರತ್ ಜಿಲ್ಲೆಯ ಸುಮಿತ್ (24) ಎಂದು ಗುರುತಿಸಲಾಗಿದೆ.

ನೋಯ್ಡಾ ಹೊರವಲಯದ ಚಿಪ್ಪಿಯಾನಾ ಎಂಬಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ನಡೆಯುತ್ತಿತ್ತು. ಈ ವೇಳೆ ಉಂಟಾದ ಗಲಾಟೆಯಲ್ಲಿ ಮೂವರು ಯುವಕರು ಸೇರಿಕೊಂಡು ಯುವಕ ಸುಮಿತ್‌ನನ್ನು ಥಳಿಸಿದ್ದರು. ಆತ ತಪ್ಪಿಸಿಕೊಂಡು ಹೋಗುವಾಗ ಕಾಲುವೆಯಲ್ಲಿ ಜಾರಿ ಬಿದ್ದಿದ್ದ. ಆದರೂ ಬಿಡದ ಹಂತಕರು ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಡಿಸಿಪಿ ಹೃದೇಶ್ ಕಥಾರಿಯಾ ತಿಳಿಸಿದ್ದಾರೆ.

ಬಿಸ್‌ರಾಕ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು ಪರಾರಿಯಾಗಿರುವ ಹಿಮಾಂಶು ಹಾಗೂ ಆತನ ಸಂಗಡಿಗರ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
.ಭೂ ವಿಜ್ಞಾನಿ ಪ್ರತಿಮಾ ಕೊಲೆ: ನ್ಯಾಯಾಲಯಕ್ಕೆ 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.