ನವದೆಹಲಿ: ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಜನಗಣತಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದರು.

ಎನ್ಡಿಎ ಸರ್ಕಾರವು ಮೂರನೇ ಅವಧಿಯಲ್ಲಿ 100 ದಿನಗಳನ್ನು ಪೂರೈಸಿದ ಅಂಗವಾಗಿ ಅಮಿತ್ ಶಾ ಅವರು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜನಗಣತಿ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದ ಅವರು, ನಾವು ಜನಗಣತಿಯನ್ನು ಘೋಷಣೆ ಮಾಡಿದಾಗ ಎಲ್ಲಾ ವಿವರಗಳು ಅದರಲ್ಲಿ ಸಿಗಲಿವೆ ಎಂದರು. ಜಾತಿಗಣತಿ ಕುರಿತ ಪ್ರಶ್ನೆಗಳಿಗೆ ಅಮಿತ್ ಶಾ ಈ ಮೇಲಿನಂತೆ ಉತ್ತರಿಸಿದರು.

1881ರಿಂದಲೂ ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದೆ.

ಜನಗಣತಿಯು 2020ರ ಏಪ್ರಿಲ್ 1ರಂದೇ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.

ಜನಗಣತಿ ಪ್ರಕ್ರಿಯೆಯ ವಿವರಗಳು...

ಜನಗಣತಿ ಪ್ರಕ್ರಿಯೆಯನ್ನು ನಡೆಸಲು ಅಂದಾಜು ₹12 ಸಾವಿರ ಕೋಟಿಗೂ ಅಧಿಕ ವೆಚ್ಚವಾಗಬಹುದು. ಈಗ ನಡೆಯಲಿರುವ ಜನಗಣತಿಯು ಪ್ರಥಮ ಡಿಜಿಟಲ್ ಜನಗಣತಿ ಪ್ರಕ್ರಿಯೆಯೂ ಆಗಿರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮನೆಗಳಿಗೇ ತೆರಳಿ, ಜನಗಣತಿಯ ಫಾರ್ಮ್ ಭರ್ತಿ ಮಾಡುವುದು ಸಹಜ ಪ್ರಕ್ರಿಯೆ. ಸ್ವ–ಸಮೀಕ್ಷೆಗೂ ಜನರಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿಯೇ ಪೋರ್ಟಲ್ ಲಭ್ಯವಾಗಲಿದೆ. ಅಲ್ಲಿ ಮಾಹಿತಿ ತುಂಬುವವರು ಆಧಾರ್ ಸಂಖ್ಯೆ ಅಥವಾ ಮೊಬೈಲ್ ಫೋನ್ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

ಜನಗಣತಿ ನೋಂದಣಿ ಪ್ರಧಾನ ಆಯುಕ್ತಾಲಯವು ಜನಗಣತಿ ಪ್ರಕ್ರಿಯೆಗಾಗಿ ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಮೊಬೈಲ್ ಫೋನ್, ಇಂಟರ್ನೆಟ್ ಸಂಪರ್ಕವಿದೆಯೇ, ಸ್ಮಾರ್ಟ್ಫೋನ್ ಇದೆಯೇ, ಬೈಸಿಕಲ್, ಸ್ಕೂಟರ್, ಮೊಪೆಡ್ ಇವೆಯೇ, ನಾಲ್ಕುಚಕ್ರದ ವಾಹನವಿದೆಯೇ ಎಂಬ ಪ್ರಶ್ನೆಗಳು ಇದರಲ್ಲಿ ಸೇರ್ಪಡೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.