ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಹಾಗೂ ಸುದಂದರ್‌ಬನಿ ವಲಯದ ಬಳಿ ಇರುವ ಗಡಿ ನಿಯಂತ್ರಣ ರೇಖೆ ಬಳಿ ಶಂಕಿತ ನುಸುಳುಕೋರರ ಚಲನವಲನ ಗಮನಿಸಿದ ಸೇನಾ ಪಡೆಗಳು, ಸೋಮವಾರ ನುಸುಕಿನ ವೇಳೆ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.26 ಗಡಿ ಕೇಂದ್ರಗಳ ನಿಯಂತ್ರಣ ಕಳೆದ ಭಾರತ: ಪೊಲೀಸ್ ಅಧಿಕಾರಿಯಿಂದ ವರದಿ ಬಹಿರಂಗ .
ಘಟನೆಯಲ್ಲಿ ಗುಂಡಿನ ಚಕಮಕಿ ನಡೆಯದಿದ್ದರೂ, ಎರಡೂ ಪ್ರದೇಶಗಳಲ್ಲಿ ಒಳನುಸುಳುವಿಕೆ ತಡೆಯಲು ಭಾರಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮುವಿನ ಹೊರವಲಯದ ಅಖ್ನೂರ್‌ನ ಬಟ್ಟಲ್ ಪ್ರದೇಶದಲ್ಲಿ 3–4 ಶಂಕಿತ ನುಸುಳುಕೋರರ ಅನುಮಾನಾಸ್ಪದ ಚಲನವಲನ ಗಮನಿಸಿ ಸೇನಾ ಪಡೆಗಳು ದಾಳಿ ನಡೆಸಿವೆ. ಘಟನಾ ಸ್ಥಳದಲ್ಲಿ ಸ್ಥಳದಲ್ಲಿ ಬೆಳಕು ಹರಿಸಿ ಡ್ರೋನ್ ಮೂಲಕ ಕಣ್ಗಾವಲು ಹಾಕಲಾಗಿದೆ. ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
.ಗಡಿ ನಿಯಂತ್ರಣ ರೇಖೆ ಸೈನ್ಯದ ಹಿಡಿತದಲ್ಲಿದೆ : ಬಿಕ್ರಂ ಸಿಂಗ್.
ರಜೌರಿ ಜಿಲ್ಲೆಯ ಸುಂದರ್‌ಬನಿ–ನೌಶೆರ ವಲಯದಲ್ಲಿ ನುಸುಳುಕೋರರ ಅನುಮಾನಾಸ್ಪದ ಚಲನವಲನ ಕಂಡು ಸೇನಾ ಪಡೆಗಳು ಹಲವು ಸುತ್ತಿನ ಗುಂಡು ಹಾರಿಸಿವೆ. ಮಧ್ಯರಾತ್ರಿ 12.30ರ ವೇಳೆಗೆ ಈ ಘಟನೆ ನಡೆದಿದೆ. ಅಲ್ಲಿಯೂ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ.

370ನೇ ವಿಧಿ ರದ್ದು ಮಾಡಿ ಇಂದಿಗೆ ಐದು ವರ್ಷ ತುಂಬಲಿರುವುದರಿಂದ ಜಮ್ಮು ಹಾಗೂ ಕಾಶ್ಮೀರದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.
.ಉದ್ದೇಶಪೂರ್ವಕ ಗಡಿ ನಿಯಂತ್ರಣ ರೇಖೆ ದಾಟಿದ್ದ ಸೈನಿಕನಿಗೆ 89 ದಿನ ಜೈಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.