ಲಖನೌ: ಇಲ್ಲಿನಸ್ಮೃತಿ ಉಪವನದಲ್ಲಿ ನೃತ್ಯ ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ಹಾಗೂ ರದ್ದಾದ ಕಾರ್ಯಕ್ರಮದ ಟಿಕೆಟ್ ಹಣವನ್ನು ಮರುಪಾವತಿ ಮಾಡದ ಆರೋಪದ ಮೇಲೆ ಉತ್ತರಪ್ರದೇಶದ ಜನಪ್ರಿಯ ನೃತ್ಯಗಾರ್ತಿ ಸಪ್ನಾ ಚೌಧರಿ ವಿರುದ್ಧನ್ಯಾಯಾಲಯ ಸೋಮವಾರ ಬಂಧನ ವಾರಂಟ್ ಜಾರಿ ಮಾಡಿದೆ.

ಲಖನೌ ನ್ಯಾಯಾಲಯದಹೆಚ್ಚುವರಿ ನ್ಯಾಯಾಧೀಶ ಶಾಂತನು ತ್ಯಾಗಿ ಅವರು ಈ ಪ್ರಕರಣದ ವಿಚಾರಣೆಯನ್ನು ಮುಂದಿನ ಸೆಪ್ಟೆಂಬರ್ 30ಕ್ಕೆ ನಿಗದಿಪಡಿಸಿದ್ದಾರೆ.

ಈ ಹಿಂದೆಸಪ್ನಾ ಚೌಧರಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು.

ಅಕ್ಟೋಬರ್ 14, 2018 ರಂದು ಇಲ್ಲಿನ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಚೌಧರಿ ಜೊತೆಗೆ, ಕಾರ್ಯಕ್ರಮ ಸಂಘಟಕರಾದ ಜುನೈದ್ ಅಹ್ಮದ್, ನವೀನ್ ಶರ್ಮಾ ಸೇರಿದಂತೆ ಹಲವರ ಹೆಸರುಗಳು ಎಫ್ಐಆರ್ನಲ್ಲಿ ದಾಖಲಾಗಿವೆ.

ಅಕ್ಟೋಬರ್ 13, 2018 ರಂದು ಲಖನೌದಸ್ಮೃತಿ ಉಪವನದಲ್ಲಿ ನೃತ್ಯ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮ ವೀಕ್ಷಣೆ ಮಾಡಲು ನೂರಾರು ಜನರು ಟಿಕೆಟ್ ಖರೀದಿಸಿದ್ದರು. ಆದರೆ ಸಪ್ನಾ ಮತ್ತು ಅವರ ತಂಡ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.

ಸಪ್ನಾ ಚೌಧರಿ ಮತ್ತವರ ತಂಡ ಕಾರ್ಯಕ್ರಮಕ್ಕೆ ಬರದ ಹಿನ್ನೆಲೆಯಲ್ಲಿ ಟಿಕೆಟ್ ಹಣವನ್ನು ಮರಳಿಸಬೇಕು ಎಂದು ವೀಕ್ಷಕರೊಬ್ಬರು ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.