ಫರೀದಾಬಾದ್: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿ ರಾಮನವಮಿ ದಿನದಂದು ಭಗವಾನ್ ರಾಮನ ಮೂರ್ತಿಗೆ ‘ಸೂರ್ಯ ತಿಲಕ’ ಇಡುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.

ಮಸೂರಗಳನ್ನು ಒಳಗೊಂಡಂತಹ ಜಾಲದ ನೆರವಿನಿಂದ ಹಣೆಗೆ ಸೂರ್ಯನ ಬೆಳಕು ಬೀಳುವಂತೆ ಮಾಡಲಾಗುತ್ತದೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಸಿಎಸ್ಐಆರ್– ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್ಐ) ಅಭಿವೃದ್ಧಿಪಡಿಸಿದೆ.

ರಾಮನವಮಿ ದಿನದಂದು ಮಧ್ಯಾಹ್ನ 12 ರಿಂದ ಸುಮಾರು ಆರು ನಿಮಿಷಗಳ ಕಾಲ ಸೂರ್ಯನ ಬೆಳಕು, ಗರ್ಭಗುಡಿಯಲ್ಲಿರುವ ವಿಗ್ರಹದ ಹಣೆಯ ಮೇಲೆ ಬೀಳಲಿದೆ.

‘ರಾಮ ಮಂದಿರದ ಮೂರನೇ ಮಹಡಿಯಲ್ಲಿ ಆಪ್ಟಿಕಲ್ ಲೆನ್ಸ್ವೊಂದನ್ನು ಅಳವಡಿಸಲಾಗುತ್ತದೆ. ಅದು ಪೈಪ್ಗಳಲ್ಲಿ ಅಳವಡಿಸಿರುವ ರಿಫ್ಲೆಕ್ಟರ್ಗಳ ಮೂಲಕ ಬೆಳಕನ್ನು ವಿಗ್ರಹದ ಹಣೆಯ ಮೇಲೆ ಮೂಡಿಸಲಿದೆ’ ಎಂದು ಸಿಬಿಆರ್ಐನ ಮುಖ್ಯ ವಿಜ್ಞಾನಿ ಆರ್.ಧರ್ಮರಾಜು ತಿಳಿಸಿದರು.

ಭಾರತೀಯ ಖಭೌತವಿಜ್ಞಾನ ಸಂಸ್ಥೆಯ ನೆರವಿನಿಂದ ಈ ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ. ಸೂರ್ಯನು ನಿರ್ದಿಷ್ಟ ದಿನದಂದು ಯಾವ ಜಾಗದಲ್ಲಿ ಇರುವನು ಎಂಬುದನ್ನು ನೋಡಿಕೊಂಡು ‘ಸೂರ್ಯ ತಿಲಕ’ಕ್ಕೆ ಅಗತ್ಯವಿರುವ ಮಸೂರಗಳನ್ನು ರಾಮಮಂದಿರದಲ್ಲಿ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.