ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಮೇಲೆ ಗುಂಡು ಹಾರಿಸಿದ ಬಳಿಕ ಅವರ ಸಾವನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯ ಹೊರಗೆ ಕಾಯುತ್ತಿದ್ದೆ ಎಂದು ಹತ್ಯೆಯ ಪ್ರಮುಖ ಆರೋಪಿ ಶಿವ ಕುಮಾರ್ ಗೌತಮ್ ವಿಚಾರಣೆ ವೇಳೆ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.

ಶಿವ ಕುಮಾರ್ನನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಯ ಬಗ್ಗೆ ಎಳೆಎಳೆಯಾಗಿ ವಿವರಿಸಿರುವ ಆರೋಪಿ, ‘ಗುಂಡು ಹಾರಿಸಿದ ಬಳಿಕ ಅವರ ಸಾವಿನ ಬಗ್ಗೆ ದೃಢಪಡಿಸಿಕೊಳ್ಳಲು ಬಟ್ಟೆ ಬದಲಿಸಿಕೊಂಡು ಸಿದ್ದೀಕಿಯನ್ನು ದಾಖಲಿಸಿದ್ದ ಲೀಲಾವತಿ ಆಸ್ಪತ್ರೆಯ ಎದುರು 30 ನಿಮಿಷಗಳ ಕಾಲ ಕಾದು ಕುಳಿತಿದ್ದೆ. ಸಿದ್ದೀಕಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವುದು ತಿಳಿಯುತ್ತಿದ್ದಂತೆ ಅಲ್ಲಿಂದ ತೆರಳಿದ್ದೆ’ ಎಂದು ಹೇಳಿದ್ದಾನೆ.

ಮುಂಬೈನ ಬಾಂದ್ರಾದಲ್ಲಿ ಅ.12ರಂದು ರಾತ್ರಿ ಬಾಬಾ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.
.ಬಾಬಾ ಸಿದ್ದೀಕಿ ಹತ್ಯೆ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ಮಾಡಿದ್ದ ಹಂತಕರು.ಬಾಬಾ ಸಿದ್ದೀಕಿ ಹತ್ಯೆ: ಯೂಟ್ಯೂಬ್ ನೋಡಿ ಶೂಟ್ ಮಾಡುವುದನ್ನು ಕಲಿತಿದ್ದ ಹಂತಕರು!.ಬಾಬಾ ಸಿದ್ದೀಕಿ ಒಳ್ಳೆ ಮನುಷ್ಯ ಆಗಿರಲಿಲ್ಲ.. ಬಿಷ್ಣೋಯಿ ಗ್ಯಾಂಗ್ ಸದಸ್ಯ.ಬಾಬಾ ಸಿದ್ದೀಕಿ, ಅವರ ಮಗ ಜೀಶನ್ ಇಬ್ಬರೂ ನಮ್ಮ ಗುರಿಯಾಗಿದ್ದರು: ಆರೋಪಿಗಳ ಹೇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.