ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದ ಬಿಜೆಪಿಯ ಸಾಕ್ಷಿ ಮಹಾರಾಜ್ ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ನ್ನು ಭೇಟಿ ಮಾಡಿದ್ದಾರೆ.

ಸೀತಾಪುರ್ ಜಿಲ್ಲಾಕಾರಾಗೃಹದಲ್ಲಿ ಕುಲದೀಪ್ ಅವರನ್ನುಭೇಟಿ ಮಾಡಿದ ಬಿಜೆಪಿ ಸಂಸದ, ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ.

ಕುಲದೀಪ್ ಸಿಂಗ್ಸೆಂಗರ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಜೂನ್ 4, 2017ರಲ್ಲಿ ಕೆಲಸದ ವಿಷಯಕ್ಕಾಗಿ ಭೇಟಿ ಮಾಡಲು ಬಂದ ಮಹಿಳೆಯೊಬ್ಬರನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಕುಲದೀಪ್ ಆರೋಪಿಯಾಗಿದ್ದಾರೆ.

ಕುಲದೀಪ್ ಜತೆಗಿನ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್, ನಮ್ಮ ಯಶಸ್ವಿ ಮತ್ತು ಜನಪ್ರಿಯ ಶಾಸಕ ಇಲ್ಲಿ ಕೆಲವು ಕಾಲಗಳಿಂದ ಇಲ್ಲಿದ್ದಾರೆ. ಚುನಾವಣೆ ನಂತರ ಅವರಿಗೆ ಧನ್ಯವಾದ ಹೇಳೋಣ ಎಂದು ನಾನು ಬಂದೆ ಎಂದಿದ್ದಾರೆ.

ಶಾಸಕನಿಗೆ ಧನ್ಯವಾದ ಹೇಳಲು ಬಂದಿದ್ದೆ ಎಂದ ಸಾಕ್ಷಿ ಮಹಾರಾಜ್, ಅವರಿದೆ ಧನ್ಯವಾದ ಹೇಳಿ ಹೊರಟು ಹೋಗಿದ್ದಾರೆ.ಅವರಿಬ್ಬರ ಭೇಟಿ 2 ನಿಮಿಷಗಳ ಕಾಲ ಇತ್ತು ಎಂದು ಜೈಲಿನ ಅಧಿಕಾರಿ ಡಿ.ಸಿ. ಮಿಶ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.