ಮುಂಬೈ: ಎನ್‌ಕೌಂಟರ್ ಪರಿಣತ ಎಂದೇ ಹೆಸರಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ 18 ವರ್ಷದ ಹಿಂದಿನ ‘ನಕಲಿ ಎನ್‌ಕೌಂಟರ್’ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಇದೇ ವೇಳೆ ನಕಲಿ ಎನ್‌ಕೌಂಟರ್‌ಗೆ ಪ್ರಕಣರದಲ್ಲಿ ಶರ್ಮಾ ಅವರನ್ನು ಖುಲಾಸೆಗೊಳಿಸಿ 2013ರಲ್ಲಿ ಮುಂಬೈನ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಇದೇ ವೇಳೆ ಹೈಕೋರ್ಟ್ ರದ್ದುಪಡಿಸಿತು.

ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಧೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠವು ಈ ಶಿಕ್ಷೆ ವಿಧಿಸಿ ಅದೇಶ ನೀಡಿತು. ಅಲ್ಲದೆ, ಮೂರು ವಾರಗಳಲ್ಲಿ ಶರಣಾಗಬೇಕು ಎಂದು ಅಪರಾಧಿ ಪ್ರದೀಪ್ ಶರ್ಮಾಗೆ ಆದೇಶಿಸಿತು.

ಭೂಗತ ಪಾತಕಿ ಛೋಟಾ ರಾಜನ್‌ನ ಆಪ್ತ ಎಂದು ಹೇಳಲಾಗಿದ್ದ ರಾಮ ನಾರಾಯಣ ಗುಪ್ತ ಅಲಿಯಾಸ್ ಲಖ್ಖಾನ್ ಭಯ್ಯಾ ಎಂಬಾತನ ‘ನಕಲಿ ಎನ್‌ಕೌಂಟರ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈಗ ಜೀವಾವಧಿ ಶಿಕ್ಷೆ ವಿಧಿಸಿದೆ.

ನಕಲಿ ಎನ್‌ಕೌಂಟರ್ ಸಂಬಂಧ ಪೊಲೀಸ್ ಆಧಿಕಾರಿ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಮೊದಲ ಪ್ರಕರಣವು ಇದಾಗಿದೆ. ಪ್ರದೀಪ್ ಶರ್ಮಾ (63) ಸ್ವಯಂ ನಿವೃತ್ತಿ ಪಡೆದ ಬಳಿಕ ಶಿವಸೇನೆಗೆ ಸೇರಿದ್ದರು. 2019ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ, ಸೋತಿದ್ದರು. ಮೂರು ದಶಕಗಳ ಸೇವೆಯಲ್ಲಿ ಭೂಗತಪಾತಕಿಗಳು, ಉಗ್ರರು, ಶಾರ್ಪ್ ಶೂಟರ್ ಸೇರಿ 113 ಕ್ರಿಮಿನಲ್‌ಗಳಿಗೆ ಅಂತ್ಯ ಹಾಡಿದ್ದರು.

‘ಶರ್ಮಾರನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್‌ನ ಆದೇಶವು ಅಸಮರ್ಥನೀಯ. ವಿಚಾರಾಣಾಧೀನ ನ್ಯಾಯಾಲಯವು ಶರ್ಮಾ ವಿರುದ್ಧದ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸಿಲ್ಲ’ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೇರಿ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೆಳಹಂತದ ಕೋರ್ಟ್ ನೀಡಿದ್ದ ಆದೇಶವನ್ನು ಪೀಠವು ಎತ್ತಿಹಿಡಿಯಿತು. 13 ಪೊಲೀಸರು ಸೇರಿ 22 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಘಟನೆಯು 2006ರ ನವೆಂಬರ್ 11ರಲ್ಲಿ ನಡೆದಿತ್ತು. ನವೀ ಮುಂಬೈನ ವಶಿಯಿಂದ ಲಖ್ಖಾನ್ ಭಯ್ಯಾನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದೇ ದಿನ ನಾನಾ ನಾನಿ ಪಾರ್ಕ್ ಬಳಿ ಎನ್‌ಕೌಂಟರ್ ನಡೆದಿತ್ತು.

ಅದೇ ವರ್ಷದ ನವೆಂಬರ್ 15ರಂದು ಲಖ್ಖಾನ್ ಭಯ್ಯಾ ಸಹೋದರ, ವಕೀಲ ರಾಮಪ್ರಸಾದ್ ಗುಪ್ತಾ ಇದು ‘ನಕಲಿ ಎನ್‌ಕೌಂಟರ್’ ಎಂದು ದೂರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೃತ್ಯದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.