ಪುಣೆ: ಆರ್ಡರ್ ಮಾಡಿದ್ದ ಪಿಜ್ಜಾವನ್ನು ತಡವಾಗಿ ತಂದಿದ್ದಕ್ಕೆ ವ್ಯಕ್ತಿಯೊಬ್ಬರು ಡೆಲಿವರಿ ಬಾಯ್ ಜತೆ ಜಗಳವಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಆರೋಪಿಯನ್ನು ಚೇತನ್ ಪಾದ್‌ವಾಲ್ ಎಂದು ಗುರುತಿಸಲಾಗಿದೆ. ಪುಣೆಯ ವಾಂಗ್‌ಹೋಲಿ ಪಟ್ಟಣದಲ್ಲಿರುವ ಪಿಜ್ಜಾ ಔಟ್ಲೆಟ್‌ನಲ್ಲಿ ಪಿಜ್ಜಾವನ್ನು ಆರ್ಡರ್ ಮಾಡಿದ್ದರು. ಆದರೆ ಫುಡ್ ಡೆಲಿವರಿ ಬಾಯ್ ರುಷೀಕೇಶ್ ತಡವಾಗಿ ಬಂದಿದ್ದಾರೆ ಎಂದು ಆರೋಪಿಸಿ, ಕೊರಳಪಟ್ಟಿ ಹಿಡಿದು ಅವಾಚ್ಯ ಪದಗಳಿಂದ ಚೇತನ್ ನಿಂದಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ರುಷೀಕೇಶ್‌ನ ಸಹದ್ಯೋಗಿಗಳು ತಡವಾದದ್ದರ ಬಗ್ಗೆ ವಿವರಿಸಿದರೂ ಸಮಾಧನಗೊಳ್ಳಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಡೆಲಿವರಿ ಬಾಯ್ ನೀಡಿದ ದೂರನ್ನು ಆಧಾರಿಸಿ ಆರೋಪಿಯನ್ನು ಬಂಧಿಸಿಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.