ವಯನಾಡು: ಸಂತ್ರಸ್ತರಿಗೆ ಕಾಂಗ್ರೆಸ್ ಪಕ್ಷ 100 ಮನೆಗಳನ್ನು ನಿರ್ಮಿಸಿಕೊಡಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಭೂಕುಸಿತ ಸಂಭವಿಸಿದ ವಯನಾಡಿನ ಗ್ರಾಮಗಳಿಗೆ ನಿನ್ನೆ ಭೇಟಿ ನೀಡಿದ್ದರು.
.Wayanad landslide | ಸುಮಾರು 300 ಮಂದಿ ನಾಪತ್ತೆ: ಎಡಿಜಿಪಿ ಅಜಿತ್ ಕುಮಾರ್.Wayanad Landslides | ಮರಳು ಕಲಾಕೃತಿ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ.
ಭೂಕುಸಿತದಿಂದ ಉಂಟಾದ ವಿನಾಶದ ವ್ಯಾಪ್ತಿಯನ್ನು ವೀಕ್ಷಿಸಿದ ಅವರು ಇದನ್ನು ‘ರಾಷ್ಟ್ರೀಯ ವಿಪತ್ತು‘ ಎಂದು ಕರೆದರು. ಹಾಗೇ ತುರ್ತು ಸಮಗ್ರ ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಜುಲೈ 30ರಂದು ಮುಂಡಕ್ಕೈ, ಚೂರಲ್ಮಲ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ 300ರ ಗಡಿ ದಾಟಿದೆ. ಇನ್ನೂ 350ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಭಾರಿ ಯಂತ್ರಗಳ ಮೂಲಕ ಕಲ್ಲುಬಂಡೆಗಳನ್ನು ತೆರುವುಗೊಳಿಸಿ, ಅವಶೇಷಗಳಡಿ ಸಿಲುಕಿರುವವರನ್ನು ಹೊರಕ್ಕೆ ತರಲು ರಕ್ಷಣಾ ತಂಡಗಳು ಎಡಬಿಡದೆ ಕಾರ್ಯಾಚರಣೆ ನಡೆಸುತ್ತಿದೆ.
.Wayanad Landslides | 300ರ ಗಡಿ ದಾಟಿದ ಮೃತರ ಸಂಖ್ಯೆ; ಮುಂದುವರಿದ ಕಾರ್ಯಾಚರಣೆ.Wayanad Landslides|ಕಷ್ಟದ ಸಮಯದಲ್ಲಿ ನಾವು ಭಾರತೀಯರ ಜತೆಯಲ್ಲಿರುತ್ತೇವೆ: ಬೈಡನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.