ಪಟಿಯಾಲ: 2003ರ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕ ದಲೇರ್ ಮೆಹಂದಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಟಿಯಾಲ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮೆಹಂದಿ ಅವರನ್ನು ಗುರುವಾರ ಬಂಧಿಸಿ ಜೈಲಿಗೆ ಕಳುಹಿಸಲಾಯಿತು.

2003ರ ಸೆಪ್ಟೆಂಬರ್ನಲ್ಲಿ ಬಕ್ಷೀಶ್ ಸಿಂಗ್ ಎಂಬ ವ್ಯಕ್ತಿಯೊಬ್ಬರು ಮೆಹಂದಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.

‘1998 ಹಾಗೂ 99ರಲ್ಲಿ ಮೆಹಂದಿ ಹಾಗೂ ಅವರ ಸಹೋದರ ಶಮ್ಶೇರ್ ಸಿಂಗ್, 10 ಜನರನ್ನು ಒಳಗೊಂಡ ಎರಡು ತಂಡಗಳನ್ನು ಅಮೆರಿಕಕ್ಕೆ ಅಕ್ರಮವಾಗಿ ಕರೆದೊಯ್ದಿದ್ದರು. ನನ್ನನ್ನೂ ಕರೆದೊಯ್ಯುವುದಾಗಿ ನಂಬಿಸಿ ನನ್ನಿಂದ ₹ 13 ಲಕ್ಷ ಪಡೆದರು. ಆದರೆ, ಅವರು ನನ್ನನ್ನು ವಿದೇಶಕ್ಕೆ ಕಳುಹಿಸಲೇ ಇಲ್ಲ ಮತ್ತು ನನ್ನ ಹಣವನ್ನೂ ಹಿಂತಿರುಗಿಸಲಿಲ್ಲ’ ಎಂದು ಬಕ್ಷೀಶ್ ಸಿಂಗ್ ಆರೋಪಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪಟಿಯಾಲ ನ್ಯಾಯಾಲಯವು ಎರಡು ದಶಕಗಳ ನಂತರ ಮೆಹಂದಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

1990ರ ದಶಕದಲ್ಲಿ ಜನಪ್ರಿಯರಾಗಿದ್ದ 51ರ ಹರೆಯದ ಈ ಗಾಯಕ ರಂಗ್ ದೇ ಬಸಂತಿ ಸೇರಿದಂತೆ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ಹಾಡಿದ್ದಾರೆ. ಇವರ ಸಹೋದರ ಮಿಖಾ ಸಿಂಗ್ ಈಗ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಗಾಯಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.