ಪ್ರತಾಪ್ಗಢ (ಉತ್ತರ ಪ್ರದೇಶ): ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ದಲಿತ ಯುವಕನನ್ನು ಕಿಚ್ಚಿಟ್ಟು ಹತ್ಯೆ ಮಾಡಿದ ಕೃತ್ಯದ ಬಗ್ಗೆ ಎನ್ಡಿಟಿವಿ ವರದಿ ಮಾಡಿದೆ.

ಇಲ್ಲಿನ ರಾಮಪುರ್ ಬೇಲಾ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ವಿನಯ್ ಪ್ರಕಾಶ್ ಎಂಬ ಯುವಕ ಭಾನುವಾರ ಕ್ರಿಕೆಟ್ ಪಂದ್ಯ ವೀಕ್ಷಿಸಿ, ಭಾರತ ಗೆದ್ದಾಗ ಕುಣಿದು ಸಂಭ್ರಮಿಸಿದ್ದನು. ಈ ವಿಷಯದಲ್ಲಿಯೇ ಅಲ್ಲೊಂದು ಸಣ್ಣ ಜಗಳವೂ ನಡೆದಿತ್ತು.

ಸೋಮವಾರ ಬೆಳಗ್ಗೆ ಗ್ರಾಮದವರು ನೋಡಿದಾಗ ಪ್ರಕಾಶ್ ಅವರ ಗುಡಿಸಲು ಸುಟ್ಟು ಭಸ್ಮವಾಗಿತ್ತು.ಗುಡಿಸಲೊಳಗೆ ಪ್ರಕಾಶ್ ಅವರ ದೇಹ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿ ಸುಟ್ಟು ಕರಕಲಾಗಿತ್ತು.
ಕಳೆದ ರಾತ್ರಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದಾಗ ನಡೆದ ಜಗಳವೇ ಈ ಹತ್ಯೆಗೆ ಕಾರಣ ಎಂದು ಗ್ರಾಮದವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.