ಮುಂಬೈ: ಯಾವುದೇ ಭಯ ಇಲ್ಲದೆ ಹಿಂದೂ ರಾಷ್ಟ್ರಕ್ಕೆ ಬೇಡಿಕೆ ಇಡುವ 50 ಗಟ್ಟಿ ಹಿಂದೂ ಸಂಸದರನ್ನು ಆಯ್ಕೆ ಮಾಡುವುದು ಅಗತ್ಯ ಎಂದು ಬಿಜೆಪಿ ನಾಯಕ ಟಿ. ರಾಜ ಸಿಂಗ್ ಹೇಳಿದ್ದಾರೆ.
.ಭಾರತ ಹಿಂದೂ ರಾಷ್ಟ್ರವಲ್ಲ ಎಂದು ಚುನಾವಣಾ ಫಲಿತಾಂಶ ತೋರಿಸಿದೆ: ಅಮರ್ತ್ಯ ಸೇನ್.
ಗೋವಾದ ಪೊಂಡಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ’ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅವರು ಭಾಷಣ ಮಾಡಿದರು.

‘ಇಂದಿನ ದಿನಗಳಲ್ಲಿ ಹಲವು ರಾಜಕಾರಣಿಗಳು ಹಿಂದುತ್ವದ ಪ್ರಬಲ ನಾಯಕರು ಎನ್ನುವ ಸೋಗು ಹಾಕಿಕೊಂಡಿದ್ದಾರೆ. ಆದರೆ ಚುನಾವಣೆ ಗೆದ್ದ ಬಳಿಕ ಅವರು ಜಾತ್ಯಾತೀತರಾಗಿಬಿಡುತ್ತಾರೆ. ಹಿಂದೂ ರಾಷ್ಟ್ರ ಸ್ಥಾಪನೆಗೆ ಅಂತಹ ಶಾಸಕರು, ಸಂಸದರು ನಿಷ್ಪ್ರಯೋಜಕ. ಚುನಾವಣೆ ಬಳಿಕ ಜಾತ್ಯಾತೀತರಾಗುವ ಜನಪ್ರತಿನಿಧಿಗಳು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ. ಹೀಗಾಗಿ ಯಾವುದೇ ಭಯ ಇಲ್ಲದೆ ಹಿಂದೂ ರಾಷ್ಟ್ರಕ್ಕೆ ಬೇಡಿಕೆ ಇಡುವ 50 ಗಟ್ಟಿ ಹಿಂದು ಸಂಸದರನ್ನು ಆಯ್ಕೆ ಮಾಡುವುದು ಅಗತ್ಯ’ ಎಂದು ತೆಲಂಗಾಣದ ಘೋಷಮಹಲ್ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಟಿ. ರಾಜ ಸಿಂಗ್ ಹೇಳಿದ್ದಾರೆ.

ತುಷ್ಟೀಕರಣದ ರಾಜಕೀಯವು ನಮ್ಮ ಹಿಂದೂ ಭಾರತವನ್ನು ವಾಸ್ತವಿಕವಾಗಿ ದುರ್ಬಲಗೊಳಿಸಿದೆ ಎಂದು ಅವರು ನುಡಿದರು.
.ಹಿಂದೂ ಬಹುಸಂಖ್ಯಾತರಿದ್ದರೆ ಮಾತ್ರ ಪ್ರಜಾಪ್ರಭುತ್ವ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.