ಚೆನ್ನೈ: ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 100.03 ಅಡಿ ಇದ್ದು, ನೀರಾವರಿ ಪ್ರದೇಶದ ಲಕ್ಷಾಂತರ ಕೃಷಿಕರಲ್ಲಿ ಕುರುವೈ ಬೆಳೆಗೆ ನೀರು ಲಭಿಸುವ ಭರವಸೆ ಮೂಡಿಸಿದೆ.

ಜೂನ್ 12ರ ವೇಳೆಗೆ ಜಲಾಶಯದಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಎಂಟು ವರ್ಷಗಳ ಬಳಿಕ ಕುರುವೈ (ಅಲ್ಪಾವಧಿ ಬೆಳೆ) ಬೆಳೆ ಕಾಣುವ ಕನಸನ್ನು ಹೊಂದಿದ್ದಾರೆ.

ಮುಂಗಾರು ಕೇರಳವನ್ನು ಸಾಮಾನ್ಯವಾಗಿ ಮೇ 31ರ ವೇಳೆಗೆ, ನಂತರ ಕರ್ನಾಟಕ ಪ್ರವೇಶಿಸಲಿದೆ. ಈ ಅಂದಾಜಿನಲ್ಲಿ ಕುರುವೈ ಬೆಳೆಗೆ ಜಲಾಶಯದಿಂದ ನೀರು ಹರಿಸಲು ಜೂನ್ 12ರ ದಿನ ನಿಗದಿಪಡಿಸಲಾಗಿದೆ.

87 ವರ್ಷ ಹಳೆಯದಾದ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದ್ದ ಕಾರಣ ಜೂನ್ 2012ರಿಂದ 2019ರವರೆಗೂ ಕೃಷಿಗೆ ನೀರು ಹರಿಸಿಲ್ಲ. 2018ರ ಜುಲೈ, 2019ರ ಆಗಸ್ಟ್‌ನಲ್ಲಿ ಒಮ್ಮೆ ಗೇಟು ತೆರೆಯಲಾಗಿತ್ತು.

ಕೆಲವು ತಿಂಗಳಿಂದ ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಯ ಆಸುಪಾಸಿನಲ್ಲಿದೆ. ಜಲಾನಯನ ಭಾಗದಲ್ಲಿ ಈಚೆಗೆ ಮಳೆ ಆಗಿದ್ದು, ಜಲಮಟ್ಟ ಏರುವ ಆಶಯ ಮೂಡಿಸಿದೆ. ಭಾನುವಾರ ಒಳಹರಿವಿನ ಪ್ರಮಾಣ 1,252 ಕ್ಯೂಸೆಕ್ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.