ದೆಹಲಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಭದ್ರತಾ ಸಿಬ್ಬಂದಿಯನ್ನು ಎಳೆದಾಡುತ್ತಿರುವ ದೃಶ್ಯಗಳು ಇಂದು ಬಿಡುಗಡೆಯಾದ ಸದನದ ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ.

ಸದನದ ಬಾವಿಗಿಳಿದು ಗದ್ದಲವೆಬ್ಬಿಸುತ್ತಿದ್ದ ಸದಸ್ಯರನ್ನು ಮಾರ್ಷಲ್ಗಳು ತಡೆಯುವ ಪ್ರಯತ್ನ ನಡೆಸುತ್ತಿರುವುದು ವಿಡಿಯೊದಲ್ಲಿದೆ. ಇದರ ಜೊತೆಗೇ ಮಹಿಳಾ ಸಿಬ್ಬಂದಿಯೊಬ್ಬರನ್ನು ಕಾಂಗ್ರೆಸ್ನ ರಾಜ್ಯಸಭೆ ಸದಸ್ಯೆ ಛಾಯಾ ವರ್ಮಾ ಎಳೆದಾಡುವುದೂ ವಿಡಿಯೊದಲ್ಲಿ ದಾಖಲಾಗಿದೆ.

ಪ್ರತಿಪಕ್ಷದ ಸದಸ್ಯರೊಬ್ಬರು ಮೇಜುಗಳ ಮೇಲೇರಿ ಕಾಗದ ಪತ್ರಗಳನ್ನು ಹರಿದು ಎಸೆಯುವುದನ್ನೂ ವಿಡಿಯೊದಲ್ಲಿ ಕಾಣಬಹುದು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದೆ ಛಾಯಾ ವರ್ಮಾ, ‘ಮೇಲ್ಮನೆಯಲ್ಲಿ ನಿನ್ನೆ ನಡೆದ ಘಟನೆಯಲ್ಲಿ ನಮ್ಮ ಒಬ್ಬ ಸಂಸದರು ಗಾಯಗೊಂಡಿದ್ದಾರೆ. ಅವರ ಮೇಲೆ ಹಲ್ಲೆ ನಡೆದಿದೆ. ಸದನದಲ್ಲಿ ಮಾರ್ಷಲ್ಗಳನ್ನು ನಿಯೋಜಿಸುವುದರ ಅರ್ಥವೇನು ಎಂದು ಪಿಯೂಶ್ ಗೋಯಲ್ ಅವರನ್ನು ಕೇಳಿ. ನಾನು ಯಾಕೆ ಕ್ಷಮೆ ಕೇಳಬೇಕು,‘ ಎಂದು ಹೇಳಿದ್ದಾರೆ.

ಈ ಘಟನೆಗೆ ಯಾರು ಹೊಣೆ? ಸಂಸತ್ತಿನ ಕಲಾಪಗಳನ್ನು ನಡೆಸುವುದು ಸರ್ಕಾರದ ಜವಾಬ್ದಾರಿ. ನಾವು ಸಂಸತ್ತಿನಲ್ಲಿ ಜನರ ಪರವಾಗಿ ಧ್ವನಿ ಎತ್ತಿದ್ದೇವೆ. ಜನರ ಧ್ವನಿಯನ್ನು ಕೇಳದಿದ್ದಲ್ಲಿ ಇಂಥವು ಆಗುತ್ತವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.