ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ವಿರುದ್ಧ ಎಎಪಿ ಆರೋಪ: ಕೇಜ್ರಿವಾಲ್‌ರನ್ನು ಪ್ರಚಾರ ಮಂತ್ರಿ ಎಂದ ಗಂಭೀರ್‌

Published : 31 ಮಾರ್ಚ್ 2022, 2:47 IST
ಫಾಲೋ ಮಾಡಿ
Comments

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಿಜೆಪಿ ಕೊಲ್ಲಲು ಬಯಸಿದೆಎಂಬ ಎಎಪಿ ಆರೋಪಕ್ಕೆ ಸಂಸದ ಗೌತಮ್‌ ಗಂಭೀರ್‌ ತಿರುಗೇಟು ನೀಡಿದ್ದಾರೆ.

ಕೇಜ್ರಿವಾಲ್‌ರನ್ನು ಉದ್ದೇಶಿಸಿ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, ‘ಹಲೋ ದೆಹಲಿ, ಕಾಶ್ಮೀರಿ ಹಿಂದೂಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ನಾನು ಸಿಕ್ಕುಬಿದ್ದಿದ್ದೇನೆ. ಈ ಬಗ್ಗೆ ಹಲವಾರು ಸಂದರ್ಶನಗಳನ್ನು ನೀಡಿದ ನಂತರವೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈಗ ನನಗಿರುವುದು ಒಂದೇ ದಾರಿ. ನಾನು ಬಲಿಪಶುವಾಗಿದ್ದೇನೆಂದು ತೋರಿಸಿಕೊಳ್ಳುವುದು. ಬಿಜೆಪಿ ನನ್ನನ್ನು ಕೊಲ್ಲಲು ಬಯಸಿದೆ ಎಂದು ಹೇಳಿಕೊಳ್ಳುವುದು. ದಯವಿಟ್ಟು ಈ ಸಂದೇಶವನ್ನು ಹರಡಲು ಸಹಾಯ ಮಾಡಿ. ಇಂತಿ ನಿಮ್ಮ ಪ್ರಚಾರ ಮಂತ್ರಿ(ಅರವಿಂದ್‌ ಕೇಜ್ರಿವಾಲ್‌)’ ಎಂದು ಗೇಲಿ ಮಾಡಿದ್ದಾರೆ.

‘ಕಾಶ್ಮೀರ ಫೈಲ್ಸ್’ಸಿನಿಮಾ ಬಗ್ಗೆ ಕೇಜ್ರಿವಾಲ್ ಹೇಳಿಕೆ ಖಂಡಿಸಿ ಅವರ ಮನೆ ಮುಂದೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಬುಧವಾರ(ಮಾರ್ಚ್‌ 30) ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೇಜ್ರಿವಾಲ್‌ ಮನೆಯ ತಡೆ ದ್ವಾರ ಧ್ವಂಸಗೊಳಿಸಿ, ಸಿಸಿಟಿವಿ ಒಡೆದು ಹಾಕಿದ್ದರು.

ಈ ಘಟನೆಯನ್ನು ಖಂಡಿಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ‘ಪಂಜಾಬ್‌ನಲ್ಲಿ ಕೇಜ್ರಿವಾಲ್‌ರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆ ಕಾರಣ, ದೆಹಲಿ ಮುಖ್ಯಮಂತ್ರಿಯನ್ನು ಕೊಲ್ಲಲು ಬಿಜೆಪಿ ಮುಂದಾಗಿದೆ’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT