ಪಣಜಿ: ಗೋವಾದ ಕ್ಯಾಬೋ ಡಿ ರಾಮಾ ಸಮುದ್ರದಲ್ಲಿ ಪತ್ನಿಯನ್ನು ಮುಳುಗಿಸಿ ಹತ್ಯೆಗೈದು ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಗೋವಾದ ಐಷಾರಾಮಿ ಹೊಟೇಲ್‌ನ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಗೌರವ್ ಕಟಿಯಾರ್ (29) ಎಂದು ಗುರುತಿಸಲಾಗಿದ್ದು, ಮೃತ ಪತ್ನಿಯನ್ನು ದೀಕ್ಷಾ ಗಂಗವಾರ್ (27) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿದ ಬಳಿಕ ಗೌರವ್ ಸಮುದ್ರದ ಬಳಿ ಗಲಾಟೆಯನ್ನು ಸೃಷ್ಟಿಸಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು ವಿಚಾರಿಸಿದಾಗ ಪತ್ನಿ ಸಮುದ್ರದ ಅಲೆಗೆ ಸಿಲುಕಿ ಕಾಣೆಯಾದರು ಎಂದು ಹೇಳಿದ್ದಾರೆ. ಆದರೆ ಸ್ಥಳೀಯರೊಬ್ಬರು ಚಿತ್ರೀಕರಿಸಿದ ವಿಡಿಯೊದಲ್ಲಿ ಪತ್ನಿಯನ್ನು ಅಲೆಗಳ ಮಧ್ಯೆ ತಳ್ಳಿ ಗೌರವ್ ಹಿಂದಿರುಗುವುದು ಕಂಡುಬಂದಿದೆ.

ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಅದೇ ದಿನ ಸಂಜೆ ದೀಕ್ಷಾ ಅವರ ಮೃತದೇಹ ಸಮುದ್ರ ತಟದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಗೌರವ್ ಅವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.