ಜಮ್ಮು/ನವದೆಹಲಿ:ಜಮ್ಮು ವಿಮಾನ ನಿಲ್ದಾಣದಲ್ಲಿನ ವಾಯುಪಡೆ ನೆಲೆಯ ಮೇಲೆ ಬಾಂಬ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಆದೇಶಿಸಿದೆ.

ಪಾಕಿಸ್ತಾನದ ಉಗ್ರ ಸಂಘಟನೆಗಳು ಭಯೋತ್ಪಾದನಾ ದಾಳಿ ನಡೆಸಲು ಇದೇ ಮೊದಲ ಬಾರಿ ಡ್ರೋನ್ ಬಳಸಿವೆ. ಹೀಗಾಗಿ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯವು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಈ ದಾಳಿ ನಡೆಸಿದ ಡ್ರೋನ್‌ಗಳು ಪಾಕಿಸ್ತಾನದಿಂದ ಬಂದಿರಬಹುದು. ಈ ದಾಳಿಯ ಹಿಂದೆ ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರ ಸಂಘಟನೆ ಇರುವ ಸಾಧ್ಯತೆ ಇದೆ’ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.

ಜಮ್ಮುವಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ‘ಡ್ರೋನ್‌ಗಳು ಗಡಿಯಾಚೆಯಿಂದ ಬಂದು ಈ ದಾಳಿ ನಡೆಸಿ, ವಾಪಸ್ ಆಗಿರುವ ಸಾಧ್ಯತೆ ಅಧಿಕವಾಗಿದೆ. ಡ್ರೋನ್‌ಗಳು ಬಂದುಹೋದ ಪಥವನ್ನು ಪತ್ತೆ ಮಾಡಲು ಯತ್ನಿಸಲಾಗುತ್ತಿದೆ. ದಾಳಿ ನಡೆದ ಸ್ಥಳದ ಸಮೀಪದಲ್ಲಿ ಇರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಸೇನಾಠಾಣೆಯ ಆವರಣದ ಮೇಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆದರೆ ಎಲ್ಲಾ ಕ್ಯಾಮೆರಾಗಳು ರಸ್ತೆಯ ಕಡೆ ಮುಖ ಮಾಡಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆರ್‌ಡಿಎಕ್ಸ್ ಮತ್ತಿತರ ಹಲವು ಕಚ್ಚಾವಸ್ತುಗಳನ್ನು ಮಿಶ್ರಮಾಡಿ ಈ ಬಾಂಬ್‌ಗಳನ್ನು ತಯಾರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಬಾಂಬ್‌ನ ವಿವರ ಪೂರ್ಣವಾಗಿ ದೊರೆತಿಲ್ಲ. ವಿಧಿವಿಜ್ಞಾನ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ತನಿಖೆಯಲ್ಲಿ ಎನ್‌ಐಎಗೆ ಪೂರ್ಣ ಸಹಕಾರ ನೀಡುತ್ತೇವೆ’ ಎಂದು ದಿಲ್‌ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಡ್ರೋನ್ ಹಾರಿಸದಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಸಭೆ
ಡ್ರೋನ್ ದಾಳಿಯಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರ ಜತೆ ಮಂಗಳವಾರ ಸಭೆ ನಡೆಸಿದ್ದಾರೆ.

‘ಇಂತಹ ದಾಳಿಯನ್ನು ತಡೆಗಟ್ಟಲು ಅಗತ್ಯವಿರುವ ಸಲಕರಣೆಗಳನ್ನು ಭದ್ರತಾ ಪಡೆಗಳಿಗೆ ಒದಗಿಸುವ, ದೇಶದ ಯುವಜನರು ಮತ್ತು ನವೋದ್ಯಮಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಚರ್ಚೆ ನಡೆದಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಇನ್ನಷ್ಟು...
*ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಎರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ
*‘ಭೀಕರ ಶಬ್ಧ ಕೇಳಿ ಎಚ್ಚರಗೊಂಡೆವು’: ಜಮ್ಮುವಿನ ಬಾಂಬ್ ದಾಳಿಯಿಂದ ಸ್ಥಳೀಯರಿಗೆ ಆಘಾತ
*ಜಮ್ಮು: ಉಗ್ರರ ದಾಳಿಗೆ ಡ್ರೋನ್ ಬಳಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.