ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಗ್ರರ ‘ಗೋಪ್ಯ ಬೆದರಿಕೆ’ ಭದ್ರತಾ ಪಡೆಗಳಿಗೆ ಸವಾಲು

Published 14 ಜುಲೈ 2024, 15:17 IST
Last Updated 14 ಜುಲೈ 2024, 15:17 IST
ಅಕ್ಷರ ಗಾತ್ರ

ಶ್ರೀನಗರ: ನುಸುಳುಕೋರರು ಅನುಸರಿಸುತ್ತಿರುವ ‘ಗೋಪ್ಯ ಬೆದರಿಕೆ’ ಭೇದಿಸುವುದು ಜಮ್ಮು ಮತ್ತು  ಕಾಶ್ಮೀರದ ಭದ್ರತಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ನುಸುಳುಕೋರರು ‘ಸಂರಕ್ಷಣೆ ಮತ್ತು ಬಲವರ್ಧನೆಯ’ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಕಠುವಾ ಜಿಲ್ಲೆಯಲ್ಲಿ ನಡೆದ ದಾಳಿ, ಚಕಮಕಿ ಸಂದರ್ಭಗಳು ನಿದರ್ಶನವಾಗಿವೆ.

ಭಯೋತ್ಪಾದಕರ ಜೊತೆಗಿನ ಚಕಮಕಿಯನ್ನು ವಿಶ್ಲೇಷಿಸಿರುವ, ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಅಧಿಕಾರಿಗಳ ಪ್ರಕಾರ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಆದರೆ, ಕೆಳಹಂತದಲ್ಲಿ ಗುಪ್ತದಳ ಮತ್ತು ಕಣ್ಗಾವಲು ವ್ಯವಸ್ಥೆಯಲ್ಲಿನ ಲೋಪ ಒಟ್ಟು ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ತಾಂತ್ರಿಕ ಜಾಣ್ಮೆಯ ಮೇಲಿನ ಅವಲಂಬನೆಯು ಹೆಚ್ಚೇನೂ ಉಪಯೋಗಕ್ಕೆ ಬಾರದು. ಏಕೆಂದರೆ ಅಧಿಕಾರಿಗಳ ದಾರಿ ತಪ್ಪಿಸಲು ಉಗ್ರರು ಆನ್‌ಲೈನ್‌ ಬಳಕೆ ಮಾಡುತ್ತಾರೆ.  ಹೀಗಾಗಿ ಜಮ್ಮು ಪ್ರದೇಶದಲ್ಲಿ ಉಗ್ರರನ್ನು ಸದೆಬಡಿಯಲು ಕಣ್ಗಾವಲು ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಹೇಳಿದರು.

ಶಾಂತವಾಗಿದ್ದ ಪ್ರದೇಶದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಹೆಚ್ಚಾಗಿದೆ. ಅದರಲ್ಲೂ ಪೂಂಚ್‌, ರಜೌರಿ ಮತ್ತಿತರ ಕಡೆಗಳಲ್ಲಿ ಐಎಎಫ್‌ ಬೆಂಗಾವಲು ವಾಹನ, ಯಾತ್ರಾರ್ಥಿಗಳ ಬಸ್‌ ಮೇಲಿನ ದಾಳಿ ಹೆಚ್ಚಾಗಿದೆ. ಕಠುವಾದಲ್ಲಿ ಯೋಧರ ಹತ್ಯೆಯು ಭಯೋತ್ಪಾದಕ ಬೆದರಿಕೆ ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿ.

‘ಸಂರಕ್ಷಣೆ ಮತ್ತು ಬಲವರ್ಧನೆ ತಂತ್ರ’ದ ಮೂಲಕ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರವನ್ನು ನುಸುಳುತ್ತಿದ್ದಾರೆ. ಮೊದಲು ಶಾಂತವಾಗಿದ್ದು, ಸ್ಥಳೀಯರೊಂದಿಗೆ ಬೆರೆಯುತ್ತಾರೆ. ಯಾವುದೇ ದಾಳಿ ಕೈಗೊಳ್ಳುವ ಮುನ್ನ ಮುಖ್ಯಸ್ಥರ ನಿರ್ದೇಶನಕ್ಕಾಗಿ ಕಾಯುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT