ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಹಿಂದೂ ದೇಶ, ವೈರುಧ್ಯಗಳನ್ನು ಮೀರಿ ಹಿಂದೂ ಸಮಾಜ ಒಂದಾಗಬೇಕು: ಮೋಹನ್ ಭಾಗವತ್

Published : 6 ಅಕ್ಟೋಬರ್ 2024, 16:15 IST
Last Updated : 6 ಅಕ್ಟೋಬರ್ 2024, 16:15 IST
ಫಾಲೋ ಮಾಡಿ
Comments

ಕೋಟಾ: ಭಾರತ ಹಿಂದೂ ದೇಶ. ಹಿಂದೂಗಳು ಪರಸ್ಪರ ಸಾಮರಸ್ಯದಿಂದ ಬದುಕುತ್ತಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

ರಾಜಸ್ಥಾನದ ಬರನ್‌ನಲ್ಲಿ  ಆರ್‌ಎಸ್‌ಎಸ್‌ ಶನಿವಾರ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದ ರಕ್ಷಣೆಗಾಗಿ ಭಾಷೆ, ಜಾತಿ ಮತ್ತು ಪ್ರಾದೇಶಿಕ ವೈರುಧ್ಯಗಳನ್ನು ಮೀರಿ ಹಿಂದೂಗಳು ಒಂದಾಗಬೇಕು’ ಎಂದು ಕರೆ ನೀಡಿದರು.

‘ಪುರಾತನ ಕಾಲದಿಂದಲೂ ಇಲ್ಲಿ ಬದುಕುತ್ತಿದ್ದೇವೆ. ‘ಹಿಂದೂ’ ಎಂಬ ಪದ ರೂಪುಗೊಂಡಿದ್ದು ಅನಂತರ. ಹಿಂದೂಗಳು ಎಲ್ಲರಿಗೂ ಪ್ರೀತಿ ಹಂಚುತ್ತಾರೆ. ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕುತ್ತಾರೆ’ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ಕಾರ್ಯವೈಖರಿ ಯಾಂತ್ರಿಕವಾಗಿಲ್ಲ, ಚಿಂತನೆಗಳ ಆಧಾರಿತವಾಗಿದೆ. ಇದು ಸರಿಸಾಟಿಯಿಲ್ಲದ ಸಂಘಟನೆಯಾಗಿದ್ದು, ಅದರ ಮೌಲ್ಯಗಳು ಸ್ವಯಂಸೇವಕರಿಗೆ, ಅವರ ಕುಟುಂಬಗಳಿಗೆ ಮತ್ತು ಸಮಾಜಕ್ಕೆ  ದಾರಿ ದೀಪವಾಗಿದೆ ಎಂದು ಹೇಳಿದರು.

ಹಿಂದೂ ಸಮಾಜದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸಿ, ಸಮುದಾಯದೊಂದಿಗೆ ಸಂಪರ್ಕದಲ್ಲಿರಿ ಎಂದು ಸ್ವಯಂಸೇವಕರಿಗೆ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT