ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಕಲಿ ಪೋಸ್ಟ್‌ ಪತ್ತೆಹಚ್ಚಲು ಪೊಲೀಸರೊಂದಿಗೆ ಕೈಜೋಡಿಸಿ: ಮಹಿಳೆಯರಿಗೆ ಮಮತಾ

Published : 7 ಅಕ್ಟೋಬರ್ 2024, 3:12 IST
Last Updated : 7 ಅಕ್ಟೋಬರ್ 2024, 3:12 IST
ಫಾಲೋ ಮಾಡಿ
Comments

ಕೋಲ್ಕತ್ತ: ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುವ ನಕಲಿ ವಿಡಿಯೊ ಮತ್ತು ಸುಳ್ಳು ಮಾಹಿತಿಗಳು ಪತ್ತೆ ಹಚ್ಚಲು ಪೊಲೀಸರೊಂದಿಗೆ ಕೈಜೋಡಿಸಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಮಹಿಳೆಯರನ್ನು ಒತ್ತಾಯಿಸಿದ್ದಾರೆ.

ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ನಿಜವಾದ ತಾರೆಯರು. ನೀವು ಸಮಾಜವನ್ನು ಚೆನ್ನಾಗಿ ಅರಿತಿದ್ದೀರಿ, ಸಮಾಜದಲ್ಲಿನ ನಡೆಸುವ ಅಪರಾಧ ಚಟುವಟಿಕೆಗಳನ್ನು ಗುರುತಿಸುವಲ್ಲಿ ಸೈಬರ್‌ ಪೊಲೀಸರಿಗೆ ಸಹಾಯ ಮಾಡಿ ಮತ್ತು ಬಹುಮಾನಗಳನ್ನು ಗೆಲ್ಲಿ ಎಂದು ಮಮತಾ ಹೇಳಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬೇರೆಡೆ ನೀವು ಗಮನಿಸಿದ ನಕಲಿ ವಿಡಿಯೊ, ಚಿತ್ರ ಅಥವಾ ಸುಳ್ಳು ಮಾಹಿತಿಗಳನ್ನು ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಮಾಹಿತಿ ಹಂಚಿಕೊಳ್ಳಿ. ಈ ಬಗ್ಗೆ ಸೈಬರ್‌ ಪೊಲೀಸರಿಗೂ ತಿಳಿಸಿ‘ ಎಂದು ಮಮತಾ ಹೇಳಿದ್ದಾರೆ,

ಪ್ರಸ್ತುತ ಪೊಲೀಸ್‌ ಇಲಾಖೆಯಲ್ಲಿ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಇದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇನ್ನೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರನ್ನು ಪೊಲೀಸ್‌ ಸಮವಸ್ತ್ರದಲ್ಲಿ ನೋಡಲು ಬಯಸುತ್ತೇನೆ ಎಂದೂ ಮಮತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT