ಪಣಜಿ: ಭಾರತದಲ್ಲಿ ಕೆಲಸ ಮಾಡಲು ಬಯಸುವವರು ಹಿಂದೂ ಸಮುದಾಯಕ್ಕಾಗಿ ಮತ್ತು ಅದರ ಸಬಲೀಕರಣಕ್ಕಾಗಿ ದುಡಿಯಬೇಕು ಎಂದಿದ್ದಾರೆಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ.

ಪಣಜಿಯ ಡೊಣಾ ಪೌಲಾದಲ್ಲಿ ಶಿನವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಭಾರತ ಮತ್ತು ಆರ್‌ಎಸ್‌ಎಸ್ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಜೋಷಿ ಮಾತನಾಡಿದ್ದಾರೆ. ನಾನು ಮೇಧಾವಿಗಳೊಂದಿಗೆ ಮಾತನಾಡಿದ್ದು, 2020ರಲ್ಲಿ ಭಾರತವು ಉತ್ಕೃಷ್ಟ ರಾಷ್ಟ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಭಾರತದಲ್ಲಿ ಕೆಲಸ ಮಾಡಲು ಬಯಸುವವರು ಹಿಂದೂ ಸಮುದಾಯದೊಂದಿಗೆ ಕೆಲಸ ಮಾಡಿ ಅದರ ಸಬಲೀಕರಣ ಮಾಡಬೇಕು. ಭಾರತದಲ್ಲಿ ಹಿಂದೂಗಳು ಏರಿಳಿತಗಳನ್ನು ಕಂಡಿದ್ದಾರೆ. ಭಾರತವನ್ನು ಹಿಂದೂ ಸಮುದಾಯದಿಂದ ವಿಭಜಿಸಲು ಆಗುವುದಿಲ್ಲ. ಹಿಂದೂಗಳು ಸದಾ ದೇಶದ ಕೇಂದ್ರವಾಗಿರುತ್ತಾರೆ ಎಂದು ಭಯ್ಯಾಜಿ ಜೋಷಿ ಹೇಳಿದ್ದಾರೆ.

ಹಿಂದೂಗಳು ಕೋಮುವಾದಿಗಳು ಅಥವಾ ಎದುರಾಳಿಗಳು ಅಲ್ಲ. ಯಾರೊಬ್ಬರೂ ಹಿಂದೂ ಸಮುದಾಯದೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಹೇಳುವುದಿಲ್ಲ.ಹಿಂದೂಗಳಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಸೃಷ್ಟಿಸಲು ಇತರ ಸಮುದಾಯದ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿಲ್ಲ. ಆ ರೀತಿ ಯಾರೂ ಭಾವಿಸಬೇಕಾಗಿಲ್ಲ. ಹಿಂದೂಗಳು ಪ್ರಬಲರಾಗಿದ್ದು. ಯಾವುದೇ ವಿನಾಶಕಾರಿ ಚಟುವಟಿಕೆಗಳಲ್ಲಿ ತೊಡಗಿಲ್ಲ ಎಂದು ನಾವು ಜಗತ್ತಿನ ಮುಂದೆ ಧೈರ್ಯವಾಗಿ ಹೇಳಬಲ್ಲೆವು.

ಹಿಂದೂಗಳು ಮಾಡಿದ ಯುದ್ಧಗಳೆಲ್ಲವೂ ಸ್ವಯಂ ರಕ್ಷಣೆಗಾಗಿ ಆಗಿತ್ತು. ಸ್ವಯಂ ರಕ್ಷಣೆ ಎಲ್ಲರ ಹಕ್ಕು. ಸಮನ್ವಯದ ದಾರಿಯಲ್ಲಿ ನಡೆಯುವುದನ್ನು ಜಗತ್ತಿಗೆ ಕಲಿಸಬೇಕಾದ ಕರ್ತವ್ಯ ಭಾರತಕ್ಕಿದೆ. ಭಾರತ ಮತ್ತು ಹಿಂದೂಗಳಿಂದ ಮಾತ್ರ ಇದು ಸಾಧ್ಯ ಎಂದು ಭಯ್ಯಾಜಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.