ನವದೆಹಲಿ: ಹವಾಮಾನ ಬದಲಾವಣೆಯು ಆಸ್ತಿತ್ವಕ್ಕೆ ಗಂಭೀರ ಅಪಾಯವಾಗಿದ್ದು, ಇದಕ್ಕೆ ವಿಸ್ತೃತವಾದ ಪರಿಹಾರ ಕಂಡುಹಿಡಿಯಲು ನೀತಿ ಆಯೋಗದಂತೆ ಶಾಶ್ವತ ಆಯೋಗ ರಚನೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
.ಹವಾಮಾನ ಬದಲಾವಣೆ ನಿರ್ಲಕ್ಷ್ಯ ಸಲ್ಲ: ಸಿಜೆಐ ಚಂದ್ರಚೂಡ್.
ಪರಿಸರ ನಾಶ ತಡೆಗಟ್ಟಲು ಅಸ್ತಿತ್ವದಲ್ಲಿರುವ ಕಾನೂನುಗಳು ವ್ಯಾಪ್ತಿಯನ್ನು ಮೀರಿವೆ. ಈಗಿನ ಸವಾಲುಗಳನ್ನು ಎದುರಿಸಲು ಭಾರತೀಯ ಶಾಸಕಾಂಗವು ಮುಂದೆ ಬರಬೇಕೆಂದು ಎಂದು ಮತ್ತೊಬ್ಬ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ನ್ಯಾಯವಾದಿ ಜತಿಂದರ್ ಚೀಮಾ ಅವರು ಬರೆದ ‘Climate Change: The Policy, Law and Practice’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಇವರಿಬ್ಬರು ಮಾತನಾಡಿದರು.
.ಹವಾಮಾನ ಬದಲಾವಣೆ: ದೊಡ್ಡಗಾತ್ರದ ಪಕ್ಷಿಗಳ ಮೇಲೆ ಅಡ್ಡ ಪರಿಣಾಮ .
‘ಹವಾಮಾನ ಬದಲಾವಣೆ ಈಗಿನ ಗಂಭೀರ ಸಮಸ್ಯೆ. ಈ ಬಗ್ಗೆ ತಜ್ಞರು ಬರೆಯುತ್ತಲೇ ಇದ್ದಾರೆ. ನೀತಿ ಆಯೋಗ ಇರುವಂತೆ, ದೇಶದಲ್ಲಿ ಹವಾಮಾನ ಬದಲಾವಣೆ ಬಗ್ಗೆ ಪರಿಹಾರ ಹುಡುಕಲು ಶಾಶ್ವತ ಆಯೋಗ ಬೇಕಿದೆ. ಇದಕ್ಕೆ ಸಂಬಂಧಿಸಿದವರು ಕಾಲ ಕಾಲಕ್ಕೆ ಸಮಸ್ಯೆಗಳನ್ನು ಕಂಡು, ಅವುಗಳಿಗೆ ಎಲ್ಲಾ ಕೋನಗಳಿಂದಲೂ ಪರಿಹಾರ ಹುಡುಕಬೇಕು’ ಎಂದು ವಿಶ್ವನಾಥನ್ ಹೇಳಿದ್ದಾರೆ.
.ಹವಾಮಾನ ಬದಲಾವಣೆ | ಈ ಶತಮಾನದ ಮಧ್ಯದಲ್ಲಿ ಜೀವ ವೈವಿಧ್ಯ ಕ್ಷೀಣ- ವರದಿ.
ಹವಾಮಾನ ಬದಲಾವಣೆ ಬಗ್ಗೆ ಭಾರತ ಅನುಸರಿಸಬೇಕಾದ ನೀತಿಗಳ ಬಗ್ಗೆ ತಜ್ಞರ ನಡುವೆ ಸಂವಾದಗಳು ನಡೆಯುತ್ತಿವೆ. ಕಳೆದ ಒಂದು ವಾರದಲ್ಲಿ ಹವಾಮಾನ ಬದಲಾವಣೆಯ ಶಾಸನ ರೂಪಿಸುವ ಬಗ್ಗೆ ಎರಡು ಪ್ರಮುಖ ಪತ್ರಿಕೆಗಳು ಸಂಪಾದಕೀಯ ಬರೆದಿದ್ದವು. ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಹಲವು ಅಭಿವೃದ್ದಿ ಹೊಂದಿದ ದೇಶಗಳು ಕೈಗೊಂಡ ಕ್ರಮಗಳ ಬಗ್ಗೆ ವಿಶ್ಲೇಷಣೆಗಳಿದ್ದವು. ಆದರೆ ಅಭಿವೃದ್ಧಿಶೀಲ ದೇಶ ಭಾರತದಲ್ಲಿರುವ ಉಪಕ್ರಮಗಳು ಸೂಕ್ತವಾಗಿಲ್ಲ’ ಎಂದು ಹೇಳಿದ್ದಾರೆ.
.ಹವಾಮಾನ ಬದಲಾವಣೆ ಸೂಚ್ಯಂಕ: 7ನೇ ಸ್ಥಾನಕ್ಕೇರಿದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.