ನವದೆಹಲಿ:₹ 55,000 ಕೋಟಿ ವೆಚ್ಚದಲ್ಲಿ 6 ಜಲಾಂತರ್ಗಾಮಿಗಳ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಯೋಜನೆಗೆ ಭಾರತ ಚಾಲನೆ ನೀಡಲಿದೆ. ಈ ಸಂಬಂಧ ನಿರ್ಮಾಣ ಸಂಸ್ಥೆಗಳ ನೇಮಕಕ್ಕಾಗಿ ಅಕ್ಟೋಬರ್ನಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಭಾನುವಾರ ಹೇಳಿವೆ.

ಚೀನಾ ತನ್ನ ನೌಕಾಪಡೆ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ತನ್ನ ನೌಕಾಪಡೆಯ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಈ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂದು ಇವೇ ಮೂಲಗಳು ಹೇಳಿವೆ. ಈ ಯೋಜನೆಗೆ ‘ಪಿ–75 ಐ’ ಎಂದು ಹೆಸರಿಡಲಾಗಿದೆ.

ಈ ಸಂಬಂಧ ರಕ್ಷಣಾ ಸಚಿವಾಲಯವು ಭಾರತದ ಎಲ್ ಆ್ಯಂಡ್ ಟಿ ಸಮೂಹ ಹಾಗೂ ಮಜಗಾಂವ್ ಡಾಕ್ಸ್ ಲಿ. (ಎಂಡಿಎಲ್) ಹಾಗೂ ವಿದೇಶದ ಐದು ಕಂಪನಿಗಳನ್ನು ಗುರುತಿಸಿದೆ. ಜರ್ಮನಿ ಮೂಲದ ಥೈಸೆನ್ಕ್ರುಪ್ ಮರೀನ್ ಸಿಸ್ಟಂಸ್, ಸ್ಪೇನ್ನ ನವನ್ಷಿಯಾ ಹಾಗೂ ಫ್ರಾನ್ಸ್ ಮೂಲದ ನಾವಲ್ ಗ್ರೂಪ್ಗಳು ಪ್ರಮುಖ ವಿದೇಶಿ ಕಂಪನಿಗಳಾಗಿವೆ.

ವಿದೇಶಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ದೇಶೀಯವಾಗಿಯೇ ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶ. ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಇತ್ತೀಚೆಗೆ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.