ಕಠ್ಮಂಡು: ಕೈಲಾಸ– ಮಾನಸ ಸರೋವರ ಯಾತ್ರೆಯಿಂದ ಹಿಂದಿರುಗುತ್ತಿದ್ದ ಭಾರತದ 175 ಯಾತ್ರಿಗಳು ಎರಡನೇ ದಿನವೂ ನೇಪಾಳದಲ್ಲೇ ಸಿಲುಕಿಕೊಂಡಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ವಾಣಿಜ್ಯ ಉದ್ದೇಶದ ವಿಮಾನಗಳು ಹಾರಾಟ ನಡೆಸಿಲ್ಲ. ಆದ್ದರಿಂದ ಯಾತ್ರಿಗಳು ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗಲಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹವಾಮಾನ ಸುಧಾರಿಸಿದ ನಂತರ ಎಲ್ಲಾ ಯಾತ್ರಿಗಳನ್ನೂ ಆದಷ್ಟು ಬೇಗನೆ ಸ್ಥಳಾಂತರಿಸಲಾಗುವುದು’ ಎಂದು ಭಾರತೀಯ ರಾಯಭಾರ ಕಚೇರಿಯ ವಕ್ತಾರ ರೋಷನ್ ಲೆಪ್ಚಾ ತಿಳಿಸಿದ್ದಾರೆ.

ಸಿಮಿಕೋಟ್‌ನ ಹುಲ್ಮಾದಲ್ಲಿ ಭಾರತದ 200 ಯಾತ್ರಿಗಳು ಸಿಲುಕಿಕೊಂಡಿದ್ದಾರೆ ಎಂದು ರಾಯಭಾರ ಕಚೇರಿ ಭಾನುವಾರ ಹೇಳಿತ್ತು.

ನೇಪಾಳದ ಪಶ್ಚಿಮ ಮತ್ತು ಕೇಂದ್ರಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೇಶಿ ವಿಮಾನಗಳು ಹಾರಾಟ ನಡೆಸಿಲ್ಲ.

ಸಿಮಿಕೋಟ್‌ನಲ್ಲಿ 500 ಪ್ರವಾಸಿಗರಿಗೆ ಉಳಿದುಕೊಳ್ಳಲು ಮತ್ತು ಆಹಾರಕ್ಕೆ ಯಾವುದೇ ತೊಂದರೆ ಇಲ್ಲ. ತುರ್ತು ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿ ತೊಂದರೆಗೆ ಸಿಲುಕಿದ ಪ್ರವಾಸಿಗರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತದೆ.

ಕೈಲಾಸ ಮಾನಸ ಸರೋವರ ಯಾತ್ರೆಗೆ ಕಳೆದ ತಿಂಗಳು ತೆರಳಿದ್ದ ಭಾರತದ 1500 ಮಂದಿ ತೊಂದರೆ ಸಿಲುಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.