ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಮೊದಲ ‘ವಂದೇ ಮೆಟ್ರೊ’ಗೆ ನಾಳೆ ಚಾಲನೆ ನೀಡಲಿರುವ ಮೋದಿ: ಏನಿದರ ವಿಶೇಷತೆ?

Published : 15 ಸೆಪ್ಟೆಂಬರ್ 2024, 11:05 IST
Last Updated : 15 ಸೆಪ್ಟೆಂಬರ್ 2024, 11:05 IST
ಫಾಲೋ ಮಾಡಿ
Comments

ಭುಜ್(ಗುಜರಾತ್): ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ದೇಶದ ಮೊದಲ ‘ವಂದೇ ಮೆಟ್ರೊ’ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಭುಜ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಅಹಮದಾಬಾದ್‌ನಿಂದ ವರ್ಚುವಲ್ ಆಗಿ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ.

ಭುಜ್‌ನಿಂದ ಹೊರಟು ಅಹಮದಾಬಾದ್‌ ತಲುಪಲಿರುವ ಈ ರೈಲು, 359 ಕಿ.ಮೀ ದೂರವನ್ನು 5.45 ಗಂಟೆಗಳಲ್ಲಿ ಕ್ರಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 17ರಿಂದ ಈ ರೈಲಿನಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಅನುವುಮಾಡಿಕೊಡಲಾಗುತ್ತದೆ. ಈ ವಂದೇ ಮೆಟ್ರೊ ರೈಲಿನ ಟಿಕೆಟ್ ದರ ₹455 ಆಗಿದೆ.

'ಇತರ ಮೆಟ್ರೊ ರೈಲುಗಳು ಕಡಿಮೆ ಅಂತರದಲ್ಲಿ ಸಂಚರಿಸಲಿವೆ. ವಂದೇ ಮೆಟ್ರೊ ರೈಲುಗಳು ನಗರದ ಹೃದಯಭಾಗದಿಂದ ಬಾಹ್ಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ’ಎಂದು ಸಚಿವಾಲಯ ಹೇಳಿದೆ.

ಮೆಟ್ರೊ ಎಂಬ ಪದವು ನಗರ ಭೂದೃಶ್ಯದ ಪರಿಕಲ್ಪನೆ ನೀಡುತ್ತದೆ ಎಂದು ಅದು ಹೇಳಿದೆ.

‘ಗರಿಷ್ಠ 100 ಕಿ.ಮೀ ವೇಗದಲ್ಲಿ ಚಲಿಸುವ ವಂದೇ ಮೆಟ್ರೊ ರೈಲು, ಪ್ರಯಾಣಿಕರ ಖರ್ಚನ್ನು ತಗ್ಗಿಸುತ್ತದೆ. ವೇಗದ ಪ್ರಯಾಣವನ್ನು ಖಚಿತಪಡಿಸುತ್ತದೆ’ಎಂದೂ ಅದು ಹೇಳಿದೆ.

'ಅತ್ಯುತ್ತಮ ದರ್ಜೆಯ ಸೀಟುಗಳು, ಹವಾನಿಯಂತ್ರಿತ ಕ್ಯಾಬಿನ್, ಮಾಡ್ಯುಲರ್ ಇಂಟೀರಿಯರ್ಸ್ ಹೊಂದಿರುವ ವಂದೇ ಮೆಟ್ರೊ ಇತರೆ ಮೆಟ್ರೊಗಳಿಗಿಂತ ಉನ್ನತ ದರ್ಜೆಯದ್ದಾಗಿದೆ. ಅಪಘಾತ ತಡೆ ತಂತ್ರಜ್ಞಾನ ಕವಚ್‌, ಬೆಂಕಿ ಅವಘಡ ಪತ್ತೆ ತಂತ್ರಜ್ಞಾನ, ಎಮರ್ಜೆನ್ಸಿ ಲೈಟ್‌ಗಳು, ಏರೋಸಾಲ್ ಆಧಾರಿತ ಬೆಂಕಿ ನಂದಿಸುವ ವ್ಯವಸ್ಥೆಯಂತಹ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ’ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT