ನವದೆಹಲಿ: ಸಂಪೂರ್ಣ ಸ್ವದೇಶಿ ನಿರ್ಮಿತ ಪಥ ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್ಎಸ್ ಮರ್ಮಗೋವಾ‘ ಅನ್ನು ಭಾನುವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮುಂಬೈನಲ್ಲಿ ನೌಕಾಪಡೆಗೆ ನಿಯೋಜನೆ ಮಾಡಲಿದ್ದಾರೆ.

‘ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತೀಯ ನೌಕಾಪಡೆಗೆ ಈ ನೌಕೆಯಿಂದ ಶಕ್ತಿ ಹೆಚ್ಚಬಹುದು’ ಎಂಬ ಆಶಯ ಹೊಂದಲಾಗಿದೆ.

‘163 ಮೀಟರ್ ಉದ್ದದ ಈ ಯುದ್ಧನೌಕೆ ಅತ್ಯಾಧುನಿಕ ರಾಡಾರ್, ಸೆನ್ಸಾರ್ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನೊಂದು ಯುದ್ಧನೌಕೆ, ಜಲಾಂತರ್ಗಾಮಿ ಅಥವಾ ಯುದ್ಧ ವಿಮಾನವನ್ನು ಹೊಡೆದು ಉರುಳಿಸುವಂತಹ ಕ್ಷಿಪಣಿ ವ್ಯವಸ್ಥೆಯನ್ನೂ ಇದು ಹೊಂದಿದೆ’ ಎಂದು ನೌಕಾಪಡೆ ಮಾಹಿತಿ ನೀಡಿದೆ.

7,400 ಟನ್ ತೂಕದ ಈ ನೌಕೆಗೆ ಗೋವಾದ ಐತಿಹಾಸಿಕ ಬಂದರು ನಗರಿಯ ಹೆಸರು ಇಡಲಾಗಿದೆ. ಕಳೆದ ಡಿಸೆಂಬರ್ 19ರಂದು ಗೋವಾ ವಿಮೋಚನೆಯ 60ನೇ ವರ್ಷಾಚರಣೆ ಪ್ರಯುಕ್ತ ಈ ಯುದ್ಧನೌಕೆ ತನ್ನ ಮೊದಲ ಸಮುದ್ರ ಪ್ರಯಾಣ ಆರಂಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.