ಶ್ರೀನಗರ: ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಅಧ್ಯಕ್ಷಯಾಸಿನ್ ಮಲಿಕ್ನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆಬ್ರುವರಿ 14ರಂದು ನಡೆದ ಭಯೋತ್ಪಾದನಾ ದಾಳಿ ನಂತರ ಜಮಾತ್ ಎ ಇಸ್ಲಾಮಿ ಸಂಘಟನೆಗೆ ಸೇರಿದ 24 ಮಂದಿಯನ್ನು ಕಾಶ್ಮೀರದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ.ಈ ಕಾರ್ಯಾಚರಣೆ ಬಗ್ಗೆಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪೊಲೀಸರು ಈ ರೀತಿ ಬಂಧಿಸಿರುವುದರಿಂದ ನಮ್ಮ ಧರ್ಮದ ಜನರ ಮೇಲೆ ಮತ್ತಷ್ಟು ಸಂದೇಹಗಳಿಗೆ ಇದು ಆಸ್ಪದ ನೀಡಿದೆ ಎಂದು ಜಮಾತ್ ಎ ಇಸ್ಲಾಮಿ ಸಂಘಟನೆ ಹೇಳಿದೆ.

ಫೆಬ್ರುವರಿ 22- 23ರ ರಾತ್ರಿ ಹೊತ್ತಲ್ಲಿ ಪೊಲೀಸರು ಕಾಶ್ಮೀರದ ಕಣಿವೆ ಜಿಲ್ಲೆಯಲ್ಲಿರುವ ತಮ್ಮ ಸಂಘಟನೆಯ ಪ್ರಮುಖ ಮುಖಂಡರನ್ನು ಬಂಧಿಸಿದ್ದಾರೆ ಎಂದು ಜಮಾತ್ ಸಂಘಟನೆ ಹೇಳಿಕೆ ನೀಡಿದೆ.

ಡಾ. ಅಬ್ದುಲ್ ಹಮೀದ್ ಫಯಾಜ್, ನ್ಯಾಯವಾದಿ ಝಹೀದ್ ಅಲಿ (ವಕ್ತಾರ), ಗುಲಾಂ ಖದೀರ್ ಲೋನ್ ಸೇರಿದಂತೆ ಹಲವಾರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35 ಎ ಬಗ್ಗೆ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.