ನವದೆಹಲಿ:ಇಲ್ಲಿನ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್ ಗೋಡೆಗಳಲ್ಲಿ ಕಿಡಿಗೇಡಿಗಳು ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದಿದ್ದಾರೆ. ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್– 2 ರ ಕಟ್ಟಡ ಗೋಡೆಗಳಲ್ಲಿ ಬ್ರಾಹ್ಮಣ ಹಾಗೂ ಬನಿಯಾ ವಿರೋಧಿ ಬರಹಗಳನ್ನು ಬರೆಯಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿಭಾಗದ ತರಗತಿ ಕಟ್ಟಡ ಹಾಗೂ ಪ್ರಾಧ್ಯಾಪಕರ ಕೋಣೆಗಳಲ್ಲಿ ಈ ಬರಹ ಕಂಡು ಬಂದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯವು ತನಿಖೆಗೆ ಆದೇಶ ನೀಡಿದೆ.

‘ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ತರಗತಿ ಕಟ್ಟಡ ಹಾಗೂ ಪ್ರಾಧ್ಯಾಪಕರ ಕೋಣೆಗಳಲ್ಲಿ ಬರಹ ಕಂಡು ಬಂದಿರುವ ಘಟನೆಯನ್ನು ಕುಲಪತಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನಿಕಾಯದ ಡೀನ್ ಹಾಗೂ ಕುಂದುಕೊರತೆ ಸಮಿತಿಗೆ ಆದೇಶ ನೀಡಿದ್ದಾರೆ‘ ಎಂದು ಜೆನ್‌ಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ‘, ‘ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ‘, ‘ಬ್ರಾಹ್ಮಣರೇ, ಬನಿಯಾಗಳೇ ನಿಮಗಾಗಿ ನಾವು ಬರುತ್ತಿದ್ದೇವೆ, ಸೇಡು ತೀರಿಸಿಕೊಳ್ಳುತ್ತೇವೆ‘ ಎನ್ನುವ ಘೋಷಣೆಗಳನ್ನು ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ತರಗತಿ ಕಟ್ಟಡದ ಗೋಡೆಗಳಲ್ಲಿ ಬರೆಯಲಾಗಿದೆ.

‘ಶಾಖೆಗಳಿಗೆ ಮರಳಿ ಹೋಗಿ‘ ಎಂದು ಬ್ರಾಹ್ಮಣ ಪ್ರಾಧ್ಯಾಪಕರು ಇರುವ ಕೊಠಡಿಯಲ್ಲಿ ಬರೆಯಲಾಗಿದೆ.

ಎಡ ಪಕ್ಷ ಬೆಂಬಲಿತ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.

ಜೆಎನ್‌ಯುನ ಪ್ರಾಧ್ಯಾಪಕರ ಸಂಘ ಕೂಡ ಕೃತ್ಯವನ್ನು ವಿರೋಧಿಸಿ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.