ಹೈದರಾಬಾದ್: ಗಣರಾಜ್ಯೋತ್ಸವದ ಭಾಷಣದಲ್ಲಿ ಈ ಹಿಂದಿನ ತಮ್ಮ ಸರ್ಕಾರವನ್ನು ಟೀಕೆ ಮಾಡಿದ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ತಿರುಗೇಟು ನೀಡಿದ್ದಾರೆ.

ರಾಜ್ಯಪಾಲರ ಭಾಷಣ ಅಚ್ಚರಿ ತಂದಿದೆ ಎಂದು ಹೇಳಿರುವ ಅವರು, ಇದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರು ತೋರಿಸುತ್ತಿರುವ ಪ್ರೇಮದ ಸಂಕೇತ. ಇದು ಅಸಂಬದ್ಧ ಮಾತು ಎಂದು ಕಿಡಿಕಾರಿದ್ದಾರೆ.
.8 ವರ್ಷಗಳಲ್ಲಿ ಭಾರತದ ಸಾಲ ನೂರು ಲಕ್ಷ ಕೋಟಿ ರೂಪಾಯಿಗೆ ಏರಿಕೆ: ಕೆ.ಟಿ. ರಾಮರಾವ್.
‘ಈ ಹಿಂದಿನ ಸರ್ವಾಧಿಕಾರಿ ಸರ್ಕಾರ ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿತ್ತು. ತೆಲಂಗಾಣದ ಜನರು 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದರು ’ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದರು.

‘ತೆಲಂಗಾಣದಲ್ಲಿ ಕಳೆದ 10 ವರ್ಷದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಇತ್ತು. ರಾಜ್ಯಪಾಲರ ಭಾಷಣವು ಖಂಡನೆಗೆ ಅರ್ಹ. ರಾಜಭವನದಿಂದ ಇಂದು ಬೆಳಿಗ್ಗೆ ಬಂದ ಭಾಷಣಗಳು, ಪದಗಳು ಅಸಂಬದ್ಧವಾಗಿತ್ತು. ರಾಜ್ಯಪಾಲರು ಬಳಸಿದ ಪದವು ತೆಲಂಗಾಣದ ಜನರಿಗೆ ಮಾಡಿದ ಅವಮಾನವಾಗಿದೆ’ ಎಂದು ಕೆ.ಟಿ. ರಾಮರಾವ್ ಹೇಳಿದ್ದಾರೆ.
.ಗರ್ಭಿಣಿಯರು ರಾಮಾಯಣ ಓದಬೇಕು: ತಮಿಳಿಸೈ ಸೌಂದರರಾಜನ್.
‘ರಾಜ್ಯಪಾಲರು ಬಿಜೆಪಿಯ ಕಾರ್ಯಕರ್ತೆ ಎಂದು ನಾವು ತಿಳಿದುಕೊಂಡಿದ್ದೆವು. ಆದರೆ ದುರದೃಷ್ಟವಶಾತ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಂತೆ ತೋರುತ್ತಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ತಮ್ಮ ಅಭಿಮಾನ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.