ನವದೆಹಲಿ: ಕನ್ವಾರ್ ಯಾತ್ರಿಗಳು ಕಾರೊಂದನ್ನು ಧ್ವಂಸಗೊಳಿಸಿದ ಘಟನೆ ಮೋತಿನಗರ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಸಂಜೆ 5.30ರ ವೇಳೆ ರಸ್ತೆ ಬದಿ ಹೋಗುತ್ತಿದ್ದ ಯಾತ್ರಾರ್ಥಿಗಳಿಗೆ ಕಾರು ತಾಗಿತು ಎಂಬ ಕಾರಣಕ್ಕೆ ಮಾತಿನ ಚಕಮಕಿ ನಡೆಯಿತು. ಸಿಟ್ಟಿಗೆದ್ದ ಗುಂಪು ಕಾರನ್ನು ಬುಡಮೇಲು ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಮಹಿಳೆ ಹಾಗೂ ಅವರ ಗೆಳೆಯನಿಗೆ ಯಾವುದೇ ಗಾಯವಾಗಿಲ್ಲ.

‘ಕಾರಿನಲ್ಲಿದ್ದ ವ್ಯಕ್ತಿ ಯಾತ್ರಿಯೊಬ್ಬರ ಕಪಾಳಕ್ಕೆ ಹೊಡೆದರು. ಘಟನೆ ನಡೆದ 10 ನಿಮಿಷಕ್ಕೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಪ್ರಕರಣ ದಾಖಲಾಗಿದೆ’ ಎಂದು ಪಶ್ಚಿಮ ದೆಹಲಿ ಡಿಸಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಹರಿದ್ವಾರ, ಗೋಮುಖ್, ಗಂಗೋತ್ರಿ ಮತ್ತು ಸುಲ್ತಾನ್ಗಂಜ್ಗೆ ಯಾತ್ರೆಗೆ ತೆರಳುವವರನ್ನು ಕನ್ವಾರ್ ಯಾತ್ರಾರ್ಥಿಗಳು ಎಂದು ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.