ಕೊಚ್ಚಿ: ರಾಜ್ಯವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂದು ಕೇರಳದ ಎಡರಂಗ ಸರ್ಕಾರವು ಹೈಕೋರ್ಟ್ಗೆ ತಿಳಿಸಿದೆ.

ಕೇರಳ ಸಾರಿಗೆ ಅಭಿವೃದ್ಧಿ ಹಣಕಾಸು ನಿಗಮದ (ಕೆಟಿಡಿಎಫ್ಸಿ) ಠೇವಣಿ ಹಿಂದಿರುಗಿಸುವ ಸಂಬಂಧ ಹೈಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸರ್ಕಾರ ಹೀಗೆ ಹೇಳಿದೆ.

‘ಈಗ ನಮ್ಮ ರಾಜ್ಯ ಹಣಕಾಸಿನ ಮುಗ್ಗಟ್ಟಿನಲ್ಲಿದೆ. ಯಾವುದೇ ಅನುದಾನ ನೀಡಬೇಕಿದ್ದರೂ ಸರ್ಕಾರದ ಬಳಿ ಇರುವ ಹಣದಿಂದಷ್ಟೇ ಮಾಡಬೇಕಿದೆ’ ಎಂದು ಸರ್ಕಾರ ಹೇಳಿದೆ.
.ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕುತ್ತಿಲ್ಲ: ಸುಪ್ರೀಂ ಕೋರ್ಟ್ ಕದ ತಟ್ಟಿದ ಕೇರಳ.
ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದೆಯೇ ಎನ್ನುವ ಕೋರ್ಟ್ನ ಪ್ರಶ್ನೆಗೆ ಸರ್ಕಾರ ಇಲ್ಲ ಎಂದಿದೆ.

ಕೆಟಿಡಿಎಫ್ಸಿ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ತಮ್ಮ ಹಣಕಾಸಿನ ತೊಂದರೆಯನ್ನು ಪರಿಹರಿಸಿಕೊಳ್ಳಲು ಆಸ್ತಿಯನ್ನು ಮಾರಬಹುದು ಅಥವಾ ಅಡ ಇಡಬಹುದು. ದುರದೃಷ್ಟವಶಾತ್ ಈ ಎರಡೂ ಸಂಸ್ಥೆಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಎರಡೂ ಸಂಸ್ಥೆಗಳು ಜಂಟಿಯಾಗಿ ₹ 1,000 ಕೋಟಿಯ ಆಸ್ತಿ ಹೊಂದಿದೆ ಎಂದು ಸರ್ಕಾರ ಅಫಿಡವಿಟ್ನಲ್ಲಿ ಹೇಳಿದೆ.

ಸರ್ಕಾರ ಭಾರಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆಯಾದರೂ, ಕೆಎಸ್ಆರ್ಟಿಸಿಯ ವಿವಿಧ ಖರ್ಚುಗಳಿಗೆ 2018–19ರ ಅಕ್ಟೋಬರ್ನಿಂದ 2023ರ ಅಕ್ಟೋಬರ್ 15ರ ವರೆಗೆ ₹ 8,440.02 ಕೋಟಿ ಖರ್ಚು ಮಾಡಿದೆ ಎಂದು ಇದೇ ವೇಳೆ ತಿಳಿಸಿದೆ.
.CM ಪಿಣರಾಯಿ ವಿಜಯನ್ಗೆ ಕೊಲೆ ಬೆದರಿಕೆ: ಕರೆ ಮಾಡಿದ್ದು 7ನೇ ತರಗತಿ ಬಾಲಕ!.
‘ಸರ್ಕಾರ ಕೆಎಸ್ಆರ್ಟಿಸಿ ಒಳಗೊಂಡು ಸಾರ್ವಜನಿಕ ಕಂಪನಿಗಳಿಗೆ ಸರ್ಕಾರ ವಿವಿಧ ರೀತಿಯಲ್ಲಿ ಬೆಂಬಲ ನೀಡುತ್ತಿದೆಯಾದರೂ, ಅವುಗಳ ದೈನಂದಿನ ಖರ್ಚುಗಳಿಗೆ ಸಹಾಯ ಮಾಡುವ ಯಾವುದೇ ಕಾನೂನುಬದ್ಧ ನಿಯಮಗಳಿಲ್ಲ’ ಎಂದು ಸರ್ಕಾರ ಕೋರ್ಟ್ಗೆ ತಿಳಿಸಿದೆ.

ಕೆಟಿಡಿಎಫ್ಸಿಯ ಠೇವಣಿ ಹಣ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಖಾಸಗಿ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಹೀಗೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.