ನವದೆಹಲಿ: ‘1991ರಲ್ಲಿ ಉದಾರೀಕರಣದ ಬಜೆಟ್ ಮಂಡಿಸಿದ ಅದ್ಭುತ ಸಾಧನೆ ಬಗ್ಗೆ ನಮ್ಮ ಪಕ್ಷವು ಹೆಮ್ಮೆ ಪಡುತ್ತದೆ. ಅರ್ಥಪೂರ್ಣ ಹಾಗೂ ಸದೃಢವಾದ ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.

ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ 1991ರ ಜುಲೈನಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಮತ್ತು ವಿತ್ತ ಸಚಿವ ಮನಮೋಹನ್ ಸಿಂಗ್ ಅವರ ನೇತೃತ್ವದ ಉದಾರೀಕರಣ ಬಜೆಟ್, ಆರ್ಥಿಕ ಸುಧಾರಣೆಗಳ ಹೊಸ ಯುಗಕ್ಕೆ ನಾಂದಿ ಹಾಡಿತ್ತು. ಅದು ಭಾರತದ ಇತಿಹಾಸದಲ್ಲಿ ಅದ್ಭುತ ಕ್ಷಣವಾಗಿದೆ’ ಎಂದಿದ್ದಾರೆ.

‘ನಮ್ಮ ಪಕ್ಷದ ನಾಯಕರ ದೂರದೃಷ್ಟಿಯ ಕ್ರಮವು ದೇಶದಲ್ಲಿ ಕ್ರಾಂತಿಯನ್ನು ಸೃಷ್ಟಿಸಿತು. ಇದರಿಂದ ಲಕ್ಷಾಂತರ ಮಧ್ಯಮ ವರ್ಗದ ಮತ್ತು ಬಡತನದಲ್ಲಿದ್ದ ಜನರನ್ನು ಸಬಲೀಕರಣಗೊಳಿಸಿಲು ಸಾಧ್ಯವಾಯಿತು. ಈ ಸಾಧನೆ ಬಗ್ಗೆ ಕಾಂಗ್ರೆಸ್ ಪಕ್ಷವು ಹೆಮ್ಮೆ ಪಡುತ್ತದೆ. ಭಾರತದ ಬೆಳವಣಿಗೆಯ ಪಥವನ್ನು ವೇಗಗೊಳಿಸಿ ಪ್ರಗತಿ ಮತ್ತು ಸಮೃದ್ಧಿಗೆ ಸ್ಫೂರ್ತಿ ನೀಡುತ್ತಿದೆ’ ಎಂದು ಖರ್ಗೆ ಹೇಳಿದ್ದಾರೆ.

‘ಇಂದು, ಮತ್ತೊಮ್ಮೆ, ಮಧ್ಯಮ ವರ್ಗ ಮತ್ತು ಬಡವರಿಗೆ ಸಹಾಯ ಮಾಡುವ ಅರ್ಥಪೂರ್ಣ, ದೃಢವಾದ ಎರಡನೇ ತಲೆಮಾರಿನ ಸುಧಾರಣೆಗಳ ತುರ್ತು ಅವಶ್ಯಕತೆಯಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.