ನವದೆಹಲಿ: ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹಚರನನ್ನು ವಿರೋಧಿ ಗುಂಪಿನ ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣಾಧೀನ ಕೈದಿಯಾಗಿದ್ದ 33 ವರ್ಷ ವಯಸ್ಸಿನ ಪ್ರಿನ್ಸ್ ತೆವಾಟಿಯಾ, ಹತ್ಯೆಗೀಡಾದ ಕೈದಿ. 380 ಕೈದಿಗಳಿರುವ ನಂ3. ಕೇಂದ್ರ ಕಾರಾಗೃಹದ 6ನೇ ವಾರ್ಡ್ನಲ್ಲಿ ತೆವಾಟಿಯಾ ಅವರನ್ನು ಇರಿಸಲಾಗಿತ್ತು.

‘ಶುಕ್ರವಾರ ಸಂಜೆ 5.30ರ ಸುಮಾರಿಗೆ ವಿರೋಧಿ ಗುಂಪಿನ ಅತ್ತತೂರ್ ರೆಹಮಾನ್ ಜೊತೆ ತೆವಾಟಿಯಾ ಜಗಳ ಮಾಡಿಕೊಂಡಿದ್ದಾರೆ. ಎರಡೂ ಬಣಗಳ ಸದಸ್ಯರು ಘರ್ಷಣೆಯಲ್ಲಿ ತೊಡಗಿದ್ದು,ಈ ಸಂದರ್ಭ ತೆವಾಟಿಯಾ ಅವರ ಮೇಲೆ ಸುಧಾರಿತ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಗಾಯಗೊಂಡಿದ್ದ ತೆವಾಟಿಯಾ ಮತ್ತು ರೆಹಮಾನ್ ಸೇರಿ ನಾಲ್ವರನ್ನು ದೀನ್ ದಯಾಳ್ ಉಪಾಧ್ಯಾಯ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರು ಸ್ಥಿತಿ ಸ್ಥಿರವಾಗಿದ್ದು, ತೆವಾಟಿಯಾ ಮೃತಪಟ್ಟಿದ್ದಾರೆ’ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.