ಠಾಣೆ: ನವಿ ಮುಂಬೈನ ತುರ್ಬೆ ಪ್ರದೇಶದಲ್ಲಿ ನಡೆದ ಮದುವೆಯ ಪೂರ್ವಭಾವಿ ಸಮಾರಂಭವೊಂದರಲ್ಲಿ ಕತ್ತಿ ಝಳಪಿಸಿದ ಆರೋಪದಡಿ ಮದುಮಗ ಸೇರಿದಂತೆ ಇತರರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.

‘ಮದುವೆಯ ಹಳದಿ ಕಾರ್ಯಕ್ರಮದಲ್ಲಿ ಕೆಲವರು ಕತ್ತಿ ಬೀಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದನ್ನು ಜನವರಿ 25 ರಂದು ಪೊಲೀಸರು ಗಮನಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಜನವರಿ 17ರಂದು ತುರ್ಬೆ ಪ್ರದೇಶದ ಮೈದಾನವೊಂದರಲ್ಲಿ ನಡೆದ ಹಳದಿ ಕಾರ್ಯಕ್ರಮದಲ್ಲಿ ಮದುಮಗ ಸೇರಿದಂತೆ ಕೆಲವು ವ್ಯಕ್ತಿಗಳು ಕತ್ತಿ ವರಸೆ ನಡೆಸಿರುವುದಾಗಿ ತಿಳಿದುಬಂದಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನಿಡಿದರು.

‘ತುರ್ಬೆ ಎಂಐಡಿಸಿ ಪೊಲೀಸರು, ಈ ಸಂಬಂಧ ಸೋಮವಾರ ಮದುಮಗ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈವರೆಗೂ ಯಾರನ್ನು ಬಂಧಿಸಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.