ವಯನಾಡು, ಕೇರಳ: ಭೂಕುಸಿತದ ಪರಿಣಾಮ ಉಂಟಾದ ಪ್ರವಾಹದಲ್ಲಿ ಕೊಚ್ಚಿಹೋಗದಂತೆ ವ್ಯಕ್ತಿಯೊಬ್ಬರು ಬಂಡೆಯೊಂದನ್ನು ಗಟ್ಟಿಯಾಗಿ ಹಿಡಿದು ಹೋರಾಟ ನಡೆಸಿದರು.

ಆಪತ್ತಿನಿಂದ ಪಾರಾಗಲು ವ್ಯಕ್ತಿಯೊಬ್ಬರು ಇನ್ನಿಲ್ಲದ ಹೋರಾಟ ನಡೆಸುವುದನ್ನು ಕಂಡರೂ, ಪ್ರವಾಹ ಹಾಗೂ ಭೂಕುಸಿತದ ಕಾರಣದಿಂದ ನಿವಾಸಿಗಳು ಅಸಹಾಯಕರಾಗಿ ವೀಕ್ಷಿಸಬೇಕಾಗಿಯಿತು.

ಮುಂಡಕ್ಕೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಜೀವನ್ಮರಣ ಹೋರಾಟವನ್ನು ಗ್ರಾಮಸ್ಥರೊಬ್ಬರು ಚಿತ್ರಿಸಿದ್ದು, ಸ್ಥಳೀಯ ಟಿ.ವಿ ಚಾನಲ್ನಲ್ಲಿ ಅದು ಬಿತ್ತರವಾಗಿದೆ.

ವ್ಯಕ್ತಿಯು ಗ್ರಾಮದ ಶಾಲೆಯ ಬಳಿ ಬಂಡೆಯನ್ನು ರಕ್ಷಣೆಗಾಗಿ ಹಿಡಿದು ಅಂಗಲಾಚುವುದು ಬೆಳಿಗ್ಗೆ 7.30ರ ವೇಳೆಗೆ ಗೊತ್ತಾಗಿದೆ. ಕೊಚ್ಚಿಹೋಗದಂತೆ ಅವರು ಪ್ರಯಾಸ ಪಡುತ್ತಿದ್ದರು ಎಂದು ಈ ದೃಶ್ಯವನ್ನು ಮೊಬೈಲ್ ಫೋನ್ನಲ್ಲಿ ಚಿತ್ರಿಸಿದ್ದ ಬ್ಲಾಕ್ ಪಂಚಾಯತ್ ಸದಸ್ಯ ರಾಘವನ್ ಹೇಳಿದರು.

ರಕ್ಷಣಾ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸುತ್ತಿದಂತೆಯೇ, ಪ್ರವಾಹದಲ್ಲಿ ಕೊಚ್ಚಿಹೋಗದಂತೆ ಜನರು ರಕ್ಷಣೆಗಾಗಿ ಪರಸ್ಪರ ಕೈಹಿಡಿದು ಅಲ್ಲಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು.

ರಕ್ಷಣಾ ತಂಡಗಳು ಮಹಿಳೆಯರು, ವಯಸ್ಕರು ಸೇರಿದಂತೆ ಹಲವರನ್ನು ರಕ್ಷಿಸಿದ್ದು, ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಬ್ಬಿಣದ ಸೇತುವೆಯ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.