ನವದೆಹಲಿ:ಪಾಕಿಸ್ತಾನದಲ್ಲಿರುವ ಕರ್ತಾರಪುರ ಸಾಹಿಬ್ ಗುರುದ್ವಾರಕ್ಕೆ ನೂತನ ಕಾರಿಡಾರ್ ಮೂಲಕ ಭೇಟಿ ನೀಡಲಿರುವ ಮೊದಲ ಬ್ಯಾಚ್‌ನ ಯಾತ್ರಾರ್ಥಿಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಇರಲಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿರುವ ಈ ಗುರುದ್ವಾರವು ಭಾರತದ ಗಡಿಯಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಈವರೆಗೆ ಇಸ್ಲಮಾಬಾದ್‌ಗೆ ಹೋಗಿ, ಅಲ್ಲಿಂದ ಈ ಗುರುದ್ವಾರಕ್ಕೆ ಭೇಟಿ ನೀಡಬೇಕಿತ್ತು. ಇಲ್ಲವೇ ಗಡಿಯಲ್ಲಿ ನಿಂತು ದೂರದರ್ಶಕದ ಮೂಲಕ ಗುರುದ್ವಾರವನ್ನು ನೋಡಬೇಕಿತ್ತು. ಸಿಖ್ಖರ ಪವಿತ್ರ ಕ್ಷೇತ್ರವಾದ ಈ ಗುರುದ್ವಾರಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ಪಾಕಿಸ್ತಾನವು ಗಡಿಯಿಂದ 3 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಿಸಿದೆ. ಇದೇ 9ರಂದು ಮೊದಲ ತಂಡ ಭೇಟಿ ನೀಡಲಿದೆ. ಅದರಲ್ಲಿ ಮನಮೋಹನ್ ಸಿಂಗ್ ಸಹ ಇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.