ಹರಿಯಾಣ:ಕೂಲಿ ಕಾರ್ಮಿಕನಾದ ವರನ ವಯಸ್ಸು 27. ಇರುವುದು ಹರಿಯಾಣದ ಕಾತಿಹಾಳ ಬಳಿಯ ಕುಗ್ರಾಮವೊಂದರಲ್ಲಿ. ವಧುವಿನ ವಯಸ್ಸು 65. ಇರುವುದು ಅಮೆರಿಕದಲ್ಲಿ. ಇವರಿಬ್ಬರ ನಡುವೆ ಸಂಪರ್ಕ ಕಲ್ಪಿಸಿದ್ದು ಫೇಸ್‌ಬುಕ್. ಹೊಸಜೀವನಕ್ಕೆ ಕಾಲಿಟ್ಟಿರುವ ಈ ದಂಪತಿ ವಿಶಿಷ್ಟ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕ ಪ್ರವೀಣ್, ಎಬ್ನರ್ ಎಂಬುವರನ್ನು ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

‘ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದರೂ, ಉದ್ಯೋಗ ಸಿಗದ ಕಾರಣ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ.2017ರ ನವೆಂಬರ್‌ನಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿ ಈಗ ವಿವಾಹ ಬಂಧನಕ್ಕೆ ಒಳಗಾಗಿದ್ದೇವೆ’ ಎಂದು ಪ್ರವೀಣ್ ಹೇಳಿದ್ದಾರೆ.

‘ಕೆಲವು ವರ್ಷಗಳ ಹಿಂದೆ ಎಬ್ನರ್ ಅವರ ಮೊದಲ ಪತಿ ಅಪಘಾತದಲ್ಲಿ ನಿಧನರಾಗಿದ್ದಾರೆ’ ಎಂದು ಹೇಳಿರುವ ಪ್ರವೀಣ್, ‘ನಮ್ಮ ಮದುವೆ ನಂತರ, ಎಬ್ನರ್ ಅವರ ಕುಟುಂಬ ಅಮೆರಿಕಕ್ಕೆ ಹಿಂದಿರುಗಿದೆ’ ಎಂದು ತಿಳಿಸಿದ್ದಾರೆ.

‘ಎಬ್ನರ್ ಜುಲೈ 15ರಂದು ಅಮೆರಿಕಕ್ಕೆ ತೆರಳಲಿದ್ದಾರೆ. ಪ್ರವಾಸಿ ವೀಸಾದಡಿ ಸದ್ಯ ನಾನು ಅಲ್ಲಿಗೆ ಹೋಗಲಿದ್ದೇನೆ. ಪೂರ್ಣಪ್ರಮಾಣದ ವೀಸಾ ದೊರೆತರೆ ಅಲ್ಲಿಯೇ ನೆಲೆಸಲಿದ್ದೇನೆ. ಇದು ಸಾಧ್ಯವಾಗದಿದ್ದರೆ, ಎಬ್ನರ್ ಭಾರತಕ್ಕೆ ಬಂದು ಉಳಿದ ಜೀವನವನ್ನು ನನ್ನೊಂದಿಗೇ ಕಳೆಯಲು ನಿರ್ಧರಿಸಿದ್ದಾರೆ’ ಎಂದು ಪ್ರವೀಣ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.