ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆಯಾಗಿ ಮಾಯಾವತಿ ಅವರು ಬುಧವಾರ ಸರ್ವಾನುಮತದಿಂದ ಪುನರಾಯ್ಕೆಯಾದರು.

ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿಯ ಹಿರಿಯ ಪದಾಧಿಕಾರಿಗಳು, ರಾಜ್ಯ ಘಟಕಗಳ ಪ್ರತಿನಿಧಿಗಳು ಮತ್ತು ದೇಶದಾದ್ಯಂತ ಆಯ್ಕೆಯಾಗಿರುವ ಪಕ್ಷದ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು ಎಂದು ಬಿಎಸ್‌ಪಿ ಪ್ರಕಟಣೆ ತಿಳಿಸಿದೆ.

ತನ್ನನ್ನು ಮರು ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಮಾಯಾವತಿ ಅವರು, ಬಿಎಸ್‌ಪಿ ಆಂದೋಲನವನ್ನು ಬದ್ಧತೆಯಿಂದ ನಿರಂತರವಾಗಿ ಮುಂದುವರೆಸುವುದಾಗಿ ಭರವಸೆ ನೀಡಿದರು.

ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ಎಂದಿಗೂ ‘ನಿಲ್ಲುವುದಿಲ್ಲ ಅಥವಾ ಬಾಗುವುದಿಲ್ಲ, ಮುರಿಯಲು ಬಿಡುವುದಿಲ್ಲ’ ಎಂದು ಅವರು ಇದೇ ವೇಳೆ ಪ್ರತಿಜ್ಞೆ ಮಾಡಿದರು.

ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್‌ಪಿ ಪೂರ್ಣ ಬಲದೊಂದಿಗೆ ಸ್ಪರ್ಧಿಸಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.