ಮುಂಬೈ: ಗೃಹ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್) ಹಲವು ಕಚೇರಿಗಳ ಮೇಲೆ ಶನಿವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿ ನಡೆಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದೆ. ಮುಂಬೈ ಮತ್ತು ಇತರ ಸ್ಥಳಗಳಲ್ಲಿಯೂ ಶೋಧ ನಡೆಸಲಾಗಿದೆ.

ಮಿರ್ಚಿ ಹಣಕಾಸು ವ್ಯವಹಾರ ನಡೆಸಿದ್ದ ‘ಸನ್‌ಬ್ಲಿಂಕ್ ರಿಯಲ್ ಎಸ್ಟೇಟ್’ ಜತೆ ಡಿಎಚ್‌ಎಫ್‌ಎಲ್ ಸಹ ವ್ಯಾಪಾರ ವಹಿವಾಟು ನಡೆಸಿತ್ತು.

‘ಸನ್‌ಬ್ಲಿಂಕ್ ರಿಯಲ್ ಎಸ್ಟೇಟ್’ಗೆ ಡಿಎಚ್‌ಎಫ್‌ಎಲ್ ₹2,186 ಕೋಟಿ ಸಾಲ ನೀಡಿತ್ತು. ಈ ಹಣವನ್ನು ಸನ್‌ಬ್ಲಿಂಕ್‌ನಿಂದ ಮಿರ್ಚಿ ಮತ್ತು ಅವರ ಸಹಚರರ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎನ್ನುವ ಅನುಮಾನ ಮೂಡಿದೆ. ಹೀಗಾಗಿ, ಇದಕ್ಕೆ ಸಂಬಂಧಪಟ್ಟ ದಾಖಲೆಗಳ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸನ್‌ಬ್ಲಿಂಕ್ ಜತೆಗೆ ಅನುಮಾನಸ್ಪದವಾಗಿ ಯಾವುದೇ ರೀತಿಯ ವಹಿವಾಟು ನಡೆಸಿಲ್ಲ ಎಂದು ಡಿಎಚ್‌ಎಫ್‌ಎಲ್ ಸ್ಪಷ್ಟಪಡಿಸಿದೆ.

ಮಿರ್ಚಿ ಕುಟುಂಬದ ಸದಸ್ಯರ ಜತೆ ಆಸ್ತಿಗಳ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರ ವಿಚಾರಣೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.