ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 14 ಸೆಪ್ಟೆಂಬರ್‌ 2023

Published 14 ಸೆಪ್ಟೆಂಬರ್ 2023, 14:38 IST
Last Updated 14 ಸೆಪ್ಟೆಂಬರ್ 2023, 14:38 IST
ಅಕ್ಷರ ಗಾತ್ರ
Introduction

ರಾಜ್ಯ, ರಾಷ್ಟ್ರೀಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ ಹತ್ತು ಸುದ್ದಿಗಳು..

1

ಬರ ಪೀಡಿತ ತಾಲ್ಲೂಕುಗಳನ್ನು ಘೋಷಿಸಿದ ರಾಜ್ಯ ಸರ್ಕಾರ

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಬರ ತಾಲ್ಲೂಕುಗಳನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 161 ತಾಲ್ಲೂಕುಗಳು ತೀವ್ರ, 34 ತಾಲ್ಲೂಕುಗಳು ಸಾಧಾರಣ ಬರ ಪೀಡಿತ ಪ್ರದೇಶಗಳೆಂದು ಆದೇಶದಲ್ಲಿ ತಿಳಿಸಲಾಗಿದೆ.

2

ಮಧ್ಯಪ್ರದೇಶ: ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

<div class="paragraphs"><p></p></div>

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದು, ಸುಮಾರು ₹50,700 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

3

'ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್‌ಗೂ ಸಂಬಂಧವಿಲ್ಲ'

‘ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬವರಿಂದ ₹3.5 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಯಾರೇ ತಪ್ಪು ಮಾಡಿದರೂ ಕಾನೂನಿನಡಿ ಕ್ರಮ ಆಗಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

4

ಇಂಡಿಯಾ ಒಕ್ಕೂಟ 'ಸನಾತನ ಧರ್ಮ'ವನ್ನು ನಾಶಮಾಡಲು ಬಯಸುತ್ತಿದೆ: ಮೋದಿ

 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿರೋಧ ಪಕ್ಷಗಳ ಸೊಕ್ಕಿನ ಒಕ್ಕೂಟವು ಸನಾತನ ಧರ್ಮವನ್ನು ನಾಶಮಾಡಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

5

ತೆರಿಗೆ ವಂಚನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ

ರಾಜ್ಯದಲ್ಲಿ ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

6

ಹಿಂದಿ ಯಾವುದೇ ಭಾರತೀಯ ಭಾಷೆ ಜೊತೆ ಸ್ಪರ್ಧೆಗಿಳಿದಿಲ್ಲ: ಶಾ

ಹಿಂದಿ ಭಾಷೆಯು ಭಾರತದ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಹಾಗೂ ಜಾಗತಿಕ ಭಾಷೆಗಳು, ಉಪಭಾಷೆಗಳನ್ನು ಗೌರವಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

7

ತಮಿಳುನಾಡು ದೇವಾಲಯಗಳಲ್ಲಿ ಮಹಿಳಾ ಅರ್ಚಕರಿಂದ ಪೂಜೆ: ಸಿಎಂ ಸ್ಟಾಲಿನ್

 ‘ತಮಿಳುನಾಡಿನ ದ್ರಾವಿಡ ಶೈಲಿ ಸರ್ಕಾರದಿಂದ ರಾಜ್ಯದ ದೇವಾಲಯಗಳಲ್ಲಿ ಅರ್ಚಕರಾಗಿ ಮಹಿಳೆಯರು ಪ್ರವೇಶಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

8

ಖುದ್ದು ಹಾಜರಿಗೆ ವಿನಾಯಿತಿ ಕೇಳಿದ್ದ ಕೇಜ್ರಿವಾಲ್ ಮನವಿ ತಿರಸ್ಕಾರ

 ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್‌ ವಿಶ್ವವಿದ್ಯಾಲಯ ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಖುದ್ದು ಹಾಜರಿಗೆ ರಿಯಾಯಿತಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

9

ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ಗೆ ನ್ಯಾಯಾಂಗ ಬಂಧನ

ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಜೆಟ್‌ ಏರ್‌ವೇಸ್‌ನ ಸ್ಥಾಪಕರಾದ ನರೇಶ್ ಗೋಯಲ್ ಅವರನ್ನು ಪಿಎಂಎಲ್‌ಎ ಕೋರ್ಟ್‌ 14 ದಿನ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

10

ಟಿಡಿಪಿ ಜೊತೆ ಮೈತ್ರಿ ಘೋಷಿಸಿದ ಪವನ್‌ಕಲ್ಯಾಣ್

ಮುಂದಿನ ವರ್ಷ ಆಂಧ್ರಪ್ರದೇಶ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಜನ ಸೇನಾ ಪಕ್ಷದ ನಾಯಕ ಹಾಗೂ ಚಿತ್ರನಟ ಪವನ್‌ ಕಲ್ಯಾಣ್‌ ಘೋಷಿಸಿದ್ದಾರೆ.