ನವದೆಹಲಿ:ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ಒತ್ತಡವನ್ನು ಗುರುತಿಸುವುದು ಮತ್ತು ನಿರ್ವಹಣೆಗಾಗಿ ಆಂಧ್ರಪ್ರದೇಶದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ (ಎನ್ಐಟಿ) ಸಂಶೋಧಕರು ‘ಎಡ್ಜ್ ಕಂಪ್ಯೂಟಿಂಗ್ ಸ್ಟ್ಯಾಕ್’ ಹೆಸರಿನ ಪರಿಕರವನ್ನು ಅಭಿವೃದ್ಧಿಪಡಿಸಿದ್ದಾರೆ.

ವಿವಿಧ ಪರಿಕರಗಳಲ್ಲಿ ಬಳಕೆಯಾಗುವ ವಿದ್ಯುತ್ ಪ್ರಮಾಣವನ್ನು ಪರಿಶೀಲಿಸಲು ‘ಸರ್ವವನ್ನು ಬೆಸೆಯುವ ಅಂತರ್ಜಾಲ’ (ಐಒಟಿ) ಆಧಾರದಲ್ಲಿ ಸ್ವಿಚ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಎನ್ಐಟಿ ಸಂಶೋಧಕರ ಪ್ರಕಾರ, ಈ ಸ್ವಿಚ್ ಭಿನ್ನವಾಗಿದೆ. ವಿದ್ಯುತ್ ಪೂರೈಕೆ ಮಾರ್ಗ ಮತ್ತು ವೈ–ಫೈ ಎರಡರ ಸಂಪರ್ಕಕ್ಕೆ ಬರಲಿದೆ. ಈಗಾಗಲೇ ಭಾರತೀಯ ಹಕ್ಕುಸ್ವಾಮ್ಯವನ್ನು ಪಡೆದುಕೊಂಡಿದೆ.

ಐಒಟಿ ಆಧರಿಸಿದ ಸ್ವಿಚ್ ಅನ್ನು ವಿವಿಧ ಪರಿಕರಗಳಿಗೆ ಅಳವಡಿಸಿದಾಗ, ನಿರ್ದಿಷ್ಟ ಪರಿಕರಕ್ಕೆ ಎಷ್ಟು ಪ್ರಮಾಣದ ವಿದ್ಯುತ್ ಬಳಕೆ ಆಗಲಿದೆ ಎಂಬುದರ ಅಂದಾಜು ತಿಳಿಯಲಿದೆ. ಒಟ್ಟಾರೆ ನಿರ್ವಹಣೆ ಸುಲಭವಾಗಲಿದ್ದು, ವಿದ್ಯುತ್ ಶುಲ್ಕದಲ್ಲಿಯೂ ಉಳಿತಾಯವಾಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.