ಹೈದರಾಬಾದ್: ತೆಲಂಗಾಣದ ಬಿಆರ್ಎಸ್ ಸರ್ಕಾರವು ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆ ಪಕ್ಷದ ಜೊತೆ ಬಿಜೆಪಿಯು ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಆಗಮಿಸಿರುವ ಅವರು ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಆರ್ಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ, ಮುಂದೆ ಮಾಡಿಕೊಳ್ಳುವುದೂ ಇಲ್ಲ ಎಂದರು. ಬಿಆರ್ಎಸ್ ಅನ್ನು ಬಿಜೆಪಿಯ ಬಿ–ಟೀಮ್ ಎಂದು ಕರೆದಿದ್ದ ಕಾಂಗ್ರೆಸ್ ಪಕ್ಷವು, ಆಡಳಿತ ವಿರೋಧಿ ಮತಗಳನ್ನು ಒಡೆಯುವ ಮೂಲಕ ಬಿಆರ್ಎಸ್ಗೆ ಅನುಕೂಲ ಮಾಡಿಕೊಡುವ ಸಲುವಾಗಿ ಬಿಜೆಪಿ ಕಣದಲ್ಲಿದೆ ಎಂದು ಆರೋಪಿಸಿತ್ತು.

ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ‘ತೆಲಂಗಾಣದ ಸುಮಾರು 1,200 ಯುವಕರು ರಾಜ್ಯ ರಚನೆಗಾಗಿ ಪ್ರಾಣ ತೆತ್ತಿದ್ದಾರೆ. ಆದರೆ ಜನರ ಆಶೋತ್ತರಗಳು ಇನ್ನೂ ಈಡೇರಿಲ್ಲ. ಯುವಕರು, ಬಡವರು ಮತ್ತು ರೈತರು ಈಗಲೂ ಸಂಕಷ್ಟದಲ್ಲೇ ಇದ್ದಾರೆ. ಈ ಎಲ್ಲಾ ದೃಷ್ಟಿಯಿಂದ ಈ ಚುನಾವಣೆ ತೆಲಂಗಾಣಕ್ಕೆ ಬಹುಮುಖ್ಯವಾಗಿದೆ ಎಂದರು.

ತೆಲಂಗಾಣದಲ್ಲಿ ಬದಲಾವಣೆ ತರಲು ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಅಥವಾ ಎಐಎಂಐಎಂಗೆ ಹಾಕುವ ಪ್ರತಿ ಮತವೂ ಬಿಆರ್ಎಸ್ಗೆ ಹೋಗುತ್ತದೆ ಎಂದು ಮತದಾರರನ್ನು ಎಚ್ಚರಿಸಿದರು.

‘ಕಾಂಗ್ರೆಸ್ ಮತ್ತು ಎಐಎಂಐಎಂ ಪಕ್ಷಗಳು ಬಿಆರ್ಎಸ್ಅನ್ನು ಬೆಂಬಲಿಸಿರುವುದಕ್ಕೆ ಪುರಾವೆ ಇದೆ. ಎಐಎಂಐಎಂನ ಶಾಸಕರು ಗೆದ್ದಾಗಲೆಲ್ಲಾ ಅವರು ಬಿಆರ್ಎಸ್ ಅನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದ ಶಾಸಕರು ನಂತರದಲ್ಲಿ ಬಿಆರ್ಎಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಸರ್ಕಾರ ಬದಲಿಸುವ ಸಲುವಾಗಿ ಈ ಎರಡು ಪಕ್ಷಗಳಿಗೆ ನೀವು ಹಾಕುವ ಮತವು ವ್ಯರ್ಥವಾಗುತ್ತದೆ’ ಎಂದರು.

‘ಜನರೇ ಉತ್ತರಿಸಲಿದ್ದಾರೆ’: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಪನೌತಿ’ (ಅಪಶಕುನ) ಎಂದು ಕರೆದದ್ದನ್ನು ‘ಕೀಳು ಮಟ್ಟದ ಭಾಷಾ ಪ್ರಯೋಗ’ ಎಂದು ಶಾ ಅವರು ಟೀಕಿಸಿದ್ದಾರೆ.

‘ಪ್ರಧಾನಿ ಮೋದಿ ಉದ್ದೇಶಿಸಿ ವಿರೋಧಪಕ್ಷಗಳು ಕೀಳು ಮಟ್ಟದ ಭಾಷೆ ಬಳಸಿದಾಗಲೆಲ್ಲಾ ಜನರು ಬಿಜೆಪಿಗೆ ಬಹುಮತ ನೀಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ತೆಲಂಗಾಣ ಜನರೂ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದರು.

‘ಅಮಿತ್ ಶಾ ಹೆಸರನ್ನು ಅಬದ್ದಾಲ ಬಾಶಾ ಎಂದು ಬದಲಿಸೋಣ’

ಬಿಆರ್ಎಸ್ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಬದ್ದಾಲ ಬಾಶಾ (ಸುಳ್ಳಿನ ರಾಜ) ಎಂದು ಶನಿವಾರ ಕರೆದರು. ಕೊರುಟ್ಲದಲ್ಲಿ ನಡೆದ ಬಿಆರ್ಎಸ್ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಕೇಂದ್ರದ ಬಿಜೆಪಿ ಸರ್ಕಾರವು ಒಂದು ಕೈಯಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುತ್ತದೆ. ತೆಲಂಗಾಣಕ್ಕೆ ಬಂದು ಸಕ್ಕರೆ ಕಾರ್ಖಾನೆಗಳನ್ನು ಪುನಃ ತೆರೆಯುವುದಾಗಿ ಪಕ್ಷದ ನಾಯಕರು ಭರವಸೆ ನಿಡುತ್ತಾರೆ’ ಎಂದರು. ‘ಬಿಜೆಪಿಯಲ್ಲಿ ದೊಡ್ಡ ನಾಯಕರೊಬ್ಬರಿದ್ದಾರೆ. ಅವರ ಹೆಸರು ಅಮಿತ್ ಶಾ. ಅವರ ಹೆಸರನ್ನು ಅಬದ್ದಾಲ ಬಾಶಾ ಎಂದು ಬದಲಿಸೋಣ’ ಎಂದರು. ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ನಾಯಕರು ತೆಲಂಗಾಣಕ್ಕೆ ಬಂದು ಕೆ. ಚಂದ್ರಶೇಖರ ರಾವ್ ಅವರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಕೆಸಿಆರ್ ಅವರದ್ದು ನಾಲ್ಕು ಜನರಿರುವ ಕುಟುಂಬವಲ್ಲ. ತೆಲಂಗಾಣದ 4 ಕೋಟಿ ಜನರಿರುವ ಕುಟುಂಬ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.