ವಿಶ್ವಸಂಸ್ಥೆ: ಬೇಹುಗಾರಿಕೆ ಆರೋಪದಲ್ಲಿ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರ ಬಂಧನ ಮತ್ತು ಸೆರೆವಾಸದ ವೇಳೆ ಪಾಕಿಸ್ತಾನವು ವಿಯೆನ್ನಾ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ವಿಶ್ವಸಂಸ್ಥೆಗೆ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಜೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಈ ಅಂಶವಿದೆ. ಜಾಧವ್‌ಗೆ ಘೋಷಿಸಲಾಗಿದ್ದ ಗಲ್ಲುಶಿಕ್ಷೆ ಜಾರಿಗೆ ಈ ಕಾರಣದಿಂದಲೇ ತಡೆ ನೀಡಲಾಯಿತು ಎಂದು ಐಸಿಜೆ ಹೇಳಿದೆ.

‘ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲಾಗುವ ಯಾವುದೇ ವ್ಯಕ್ತಿಗೆ, ಆತನ ದೇಶದೊಂದಿಗೆ ರಾಜತಾಂತ್ರಿಕ ಭೇಟಿಯನ್ನು ನಿರಾಕರಿಸುವಂತಿಲ್ಲಎಂದು ವಿಯೆನ್ನಾ ಒಪ್ಪಂದದಲ್ಲಿ ಹೇಳಲಾಗಿದೆ. ಜಾಧವ್ ಅವರ ಪ್ರಕರಣ
ದಲ್ಲಿ ವಿಯೆನ್ನಾ ಒಪ್ಪಂದವು ಪೂರ್ಣ ಪ್ರಮಾಣದಲ್ಲಿ ಅನ್ವಯವಾಗುತ್ತದೆ. ಆದರೆ ಈ ಒಪ್ಪಂದದ ನಿಯಮಗಳನ್ನು ಪಾಕಿಸ್ತಾನವು ಉಲ್ಲಂಘಿಸಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಬೇಹುಗಾರಿಕೆ ಆರೋಪದಲ್ಲಿ ವಿದೇಶಿಯರನ್ನು ಬಂಧಿಸಿದ ನಂತರ, ಯಾವುದೇ ವಿಳಂಬವಿಲ್ಲದಂತೆ
ಆ ವಿಚಾರವನ್ನು ಆತನ ದೇಶಕ್ಕೆತಿಳಿಸಬೇಕು ಎಂದು ವಿಯೆನ್ನಾ ಒಪ್ಪಂದದ 36ನೇ ವಿಧಿ ಹೇಳುತ್ತದೆ. ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ ಮೂರು ವಾರಗಳ ನಂತರ ಪಾಕಿಸ್ತಾನವು ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ಮೂಲಕ ವಿಯೆನ್ನಾ ಒಪ್ಪಂದದ 36ನೇ ವಿಧಿಯನ್ನೂ ಪಾಕಿಸ್ತಾನ ಉಲ್ಲಂಘಿಸಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನವು ಹಲವು ನಿಯಮಗಳನ್ನು ಉಲ್ಲಂಘಿಸಿ ರುವ ಕಾರಣ, ಪ್ರಕರಣ ಮತ್ತು ಜಾಧವ್ ಅವರಿಗೆ ಘೋಷಿಸಲಾದ ಶಿಕ್ಷೆಯ ಮರುಪರಿಶೀಲನೆ, ಮರುಪರಿಗಣನೆ ಅತ್ಯಗತ್ಯ
ಅಂತರರಾಷ್ಟ್ರೀಯ ನ್ಯಾಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.