ನವದೆಹಲಿ: ‘ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ. ಅದರಲ್ಲಿ ತಪ್ಪುಗಳಿದ್ದರೆ ನಂತರದ ದಿನಗಳಲ್ಲಿ ಸರಿಪಡಿಸಬಹುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಮನವಿ ಮಾಡಿದರು.

ಸರ್ಕಾರದ ಪರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಬಿಜೆಪಯು ಒಬಿಸಿ ಪ್ರಧಾನಮಂತ್ರಿಯನ್ನು ನೀಡಿದೆ. ಇದನ್ನು ಒಬಿಸಿಗಳ ಪರವಾಗಿ ಮಾತನಾಡುತ್ತಿರುವವರು ಅರಿಯಬೇಕು. ಬಿಜೆಪಿಯ 89 ಸಂಸದರು ಮತ್ತು 29 ಸಚಿವರು ಇತರ ಹಿಂದುಳಿದ ವರ್ಗಗಳಿಂದ ಬಂದವರು’ ಎಂದು ರಾಹುಲ್ಗಾಂಧಿ ಅವರ ಆರೋಪಗಳಿಗೆ ತಿರುಗೇಟು ನೀಡಿದರು.

ಮಸೂದೆ ಜಾರಿಗೆ ವಿಳಂಬವಾಗುತ್ತದೆ ಎಂಬ ಆತಂಕಗಳನ್ನು ಅಲ್ಲಗಳೆದ ಅಮಿತ್ ಶಾ ಅವರು, ಮುಂಬರಲಿರುವ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಹೊಸ ಸರ್ಕಾರವು ಜನಗಣತಿ ಮತ್ತು ಕ್ಷೇತ್ರಮರುವಿಂಗಡಣೆ ಕೆಲಸವನ್ನು ಕೈಗೆತ್ತಿಕೊಳ್ಳಲಿದೆ. ಬಳಿಕ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಉದ್ದೇಶದ ಸಂವಿಧಾನ (128ನೇ ತಿದ್ದುಪಡಿ) ಮಸೂದೆ ಜಾರಿಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸುತ್ತದೆ. 2029ರ ನಂತರ ಈ ಮಸೂದೆ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿದರು.

ಮಹಿಳಾ ಮೀಸಲಾತಿ ಉದ್ದೇಶಿಸಿರುವ ಮಸೂದೆ ಜಾರಿಗೊಳಿಸುವ ನಿಟ್ಟಿನಲ್ಲಿ ಇದು ಐದನೇ ಬಾರಿಗೆ ನಡೆಸುತ್ತಿರುವ ಯತ್ನವಾಗಿದೆ. ಕಳೆದ ನಾಲ್ಕು ಬಾರಿಯೂ ಈ ಮಸೂದೆ ಅಂಗೀಕಾರವಾಗದ ಕಾರಣ ಮಹಿಳೆಯರು ನಿರಾಶೆಗೊಂಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.