ಅಮರಾವತಿ: ಮಾನವ ಬಾಂಬರ್ ಬಳಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಟ್ವಿಟರ್‌ನಲ್ಲಿ ಬೆದರಿಕೆ ಹಾಕಿದ್ದ ನಟ ಪವನ್ ಕಲ್ಯಾಣ ಅಭಿಮಾನಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಜಮಹೇಂದ್ರವರಂನ ರಾಜಾಪಲೇಮ್ ಫಣಿ (27) ಎಂದು ಗುರುತಿಸಲಾಗಿದೆ.

ಈತ ಜನವರಿ 16 ರಂದು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಟ್ವೀಟ್‌ಗಳು ವೈರಲ್ ಆಗಿದ್ದನ್ನು ಗಮನಿಸಿ ಅವುಗಳನ್ನು ಅಳಿಸಿ ಹಾಕಿದ್ದ.

ಈ ಕುರಿತು ಜಗನ್ ಸೇವಾದಳದ ಉಪಾಧ್ಯಕ್ಷ ಮಲ್ಯಂ ಶ್ರಿಕಾಂತ್ ಎನ್ನುವರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಬೆದರಿಕೆ ಹಾಕಿದ್ದವನನ್ನು ಬಂಧಿಸಿದ್ದಾರೆ.

‘ರಾಜಾಪಲೇಮ್ ಫಣಿ ಈತನು ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ.ಬಂಧಿತನ ಮೇಲೆ ಐಪಿಸಿ ಕಲಂ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಸೈಬರ್ ಕ್ರೈಂ ಎಸ್‌ಪಿ ಜಿ.ಆರ್. ರಾಧಿಕಾ ಹೇಳಿದ್ದಾರೆ.

Goa Assembly Elections: ಬಿಜೆಪಿ ತೊರೆದ ಪರಿಕ್ಕರ್ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.