ಮುಂಬೈ: ವಂಚಿತ ಬಹುಜನ ಅಘಾಡಿ ಪಕ್ಷದ ಸ್ಥಾಪಕರಾದ ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ಔರಂಗಾಬಾದ್ ಜಿಲ್ಲೆ ಕುಲ್ದಾಬಾದ್ನಲ್ಲಿರುವ, ಮೊಗಲ್ ದೊರೆ ಔರಂಗಜೇಬ್ ಅವರ ಗೋರಿಗೆ ಪುಷ್ಪನಮನ ಸಲ್ಲಿಸಿದ್ದು, ತಲೆಬಾಗಿ ನಮಸ್ಕರಿಸಿದರು.

ಈ ಬೆಳವಣಿಗೆ ಕುರಿತ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು, ತೀವ್ರ ರಾಜಕೀಯ ಚರ್ಚೆಗೂ ಗ್ರಾಸವಾಗಿದೆ. ಟ್ರಸ್ಟಿಗಳ ಜೊತೆಗೂಡಿ ಅವರು ಗೋರಿಗೆ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್ನ ಸದಸ್ಯರು ಪ್ರಕಾಶ್ ಅವರನ್ನು ಸನ್ಮಾನಿಸಿದರು.

ಗೋರಿಗೆ ಭೇಟಿ ನೀಡಿ ನಮಸ್ಕರಿಸಿದ ಕುರಿತ ಪ್ರಶ್ನೆಗೆ, ‘ಔರಂಗಜೇಬ್ ಅವರು 50 ವರ್ಷ ಆಡಳಿತ ನಡೆಸಿದ್ದಾರೆ. ಇತಿಹಾಸದಿಂದ ಇದನ್ನು ತೆಗೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

’ಔರಂಗಜೇಬ್ ಅಧಿಕಾರಕ್ಕೆ ಬಂದುದು ಹೇಗೆ? ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರೇ ವಿವರಿಸಿದ್ದಾರೆ. ಇದಕ್ಕಾಗಿ ನೀವು ಜೈಚಂದ್ಗೆ ಶಾಪ ಹಾಕಬೇಕು. ಜೈಚಂದ್ನಿಂದಾಗಿ ಔರಂಗಜೇಬ್ ಅಧಿಕಾರಕ್ಕೆ ಬಂದರು’ ಎಂದು ಹೇಳಿದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ನಾಯಕ, ಸಚಿವ ದಾದಾ ಭುಸೆ ಅವರು, ‘ಎಲ್ಲಿಗೆ ಹೋಗಬೇಕು, ಯಾರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬುದು ಒಬ್ಬರ ವೈಯಕ್ತಿಕವಾದ ಆಯ್ಕೆ. ಆದರೆ, ‘ಧ್ರುವೀಕರಣ’ ಉದ್ದೇಶದಿಂದ ಇದನ್ನು ಮಾಡಿದ್ದರೆ ತಪ್ಪು’ ಎಂದು ಹೇಳಿದರು.

ಪ್ರಕಾಶ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ. ವೃತ್ತಿಯಿಂದ ವಕೀಲರಾಗಿರುವ ಅವರು, ಎರಡು ಅವಧಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜ್ಯಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.