ಮುಂಬೈ: ಎದೆನೋವಿನಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ವಂಚಿತ ಬಹುಜನ ಆಘಾಡಿ ಪಕ್ಷದ (ವಿಬಿಎ) ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಅವರು ಶುಕ್ರವಾರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ, 70 ವರ್ಷ ವಯಸ್ಸಿನ ಪ್ರಕಾಶ್ ಅವರು ಬಾಳಾಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯರಾಗಿದ್ದಾರೆ. ವಕೀಲರು ಮತ್ತು ರಾಜಕಾರಣಿಯೂ ಆಗಿರುವ ಪ್ರಕಾಶ್ ಅವರು ಅಕೋಲಾದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಒಂದು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.

‘ಇದೀಗ ತಂದೆಯ ಆರೋಗ್ಯ ಸ್ಥಿರವಾಗಿದೆ’ ಎಂದು ಪ್ರಕಾಶ್ ಅವರ ಪುತ್ರ ಸುಜತ್ ಅಂಬೇಡ್ಕರ್ ಅವರು ತಿಳಿಸಿದ್ದಾರೆ.

‘ಎದೆನೋವು ಕಾಣಿಸಿಕೊಂಡ ಕಾರಣ ಗುರುವಾರ ಮುಂಜಾನೆ ಪ್ರಕಾಶ್ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಆಂಜಿಯೋಗ್ರಫಿ ಮಾಡಲಾಯಿತು’ ಎಂದು ವಿಬಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.