ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜಾಬ್‌ ಬೆಂಬಲಿಸಿ ಮಾಲೇಗಾಂವ್‌ನಲ್ಲಿ ಪ್ರತಿಭಟನೆ: ನಾಲ್ವರ ವಿರುದ್ಧ ಪ್ರಕರಣ

ಫಾಲೋ ಮಾಡಿ
Comments

ಮುಂಬೈ: ಹಿಜಾಬ್‌ ಬೆಂಬಲಿಸಿ ಮಾಲೇಗಾಂವ್‌ನಲ್ಲಿ 5ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿರುವ ಸಂಬಂಧ ನಾಸಿಕ್‌ನ ಪೊಲೀಸರು ನಾಲ್ವರು ಸಂಘಟಕರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಟನೆಯ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಜಮಿಯತ್‌ ಇ ಉಲೆಮಾ ಸಂಘಟನೆಯ ಇಮ್ತಿಯಾಜ್‌ ಅಹಮ್ಮದ್‌ ಇಕ್ಬಾಲ್‌ ಅಹಮ್ಮದ್, ಅಬ್ದುಲ್‌ ಮಲಿಕ್‌, ಮೊಹಮ್ಮದ್‌ ಯಾಸಿನ್‌ ಮತ್ತು ಮೊಹಮ್ಮದ್‌ ಅಮಿನ್‌ ಮೊಹಮ್ಮದ್‌ ಫರೂಕ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕರ್ನಾಟಕದ ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಿ ಹಿಜಾಬ್‌ ಧರಿಸಿದ ಮುಸ್ಲಿಂ ಮಹಿಳೆಯರು ಮಾಲೇಗಾಂವ್‌ನ ಕ್ರೀಡಾಂಗಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದರು. ಜಮಿಯತ್‌ ಇ ಉಲೆಮಾ ಸಂಘಟನೆ ಪ್ರತಿಭಟನೆಗೆ ಕರೆ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಾಲೇಗಾಂವ್‌ನಲ್ಲಿ ಶುಕ್ರವಾರ ಹಿಜಾಬ್‌ ದಿನ ಆಯೋಜಿಸಲಾಗಿತ್ತು. ಆದರೆ ಯಾವುದೇ ಸಭೆ ನಡೆಸಲು ಪೊಲೀಸರು ಅನುಮತಿ ನೀಡಿಲ್ಲ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT