ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಉನ್ನಾವ್ ಸಂತ್ರಸ್ತೆಯು ಆರೋಪಿಗಳು ಹಚ್ಚಿದಬೆಂಕಿಯಲ್ಲಿ ಬೇಯುತ್ತಲೇ, ಸಹಾಯಕ್ಕಾಗಿ ಅಂಗಲಾಚಿ1 ಕಿ.ಮೀ ಓಡಿದ್ದಾರೆ ಎನ್ನುವ ಹೃದಯವಿದ್ರಾವಕ ವಿಷಯವನ್ನು ಪ್ರತ್ಯಕ್ಷದರ್ಶಿ ಬಿಚ್ಚಿಟ್ಟಿದ್ದಾರೆ.

ಅತ್ಯಾಚಾರ ಪ್ರಕರಣದ ವಿಚಾರಣೆಗಾಗಿ ಸಂತ್ರಸ್ತೆ ಗುರುವಾರ ಬೆಳಿಗ್ಗೆ ರಾಯಬರೇಲಿ ನ್ಯಾಯಾಲಯಕ್ಕೆ ಹೊರಟಿದ್ದರು.ರೈಲು ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದಾಗ ಐವರು ದುಷ್ಕರ್ಮಿಗಳು ಆಕೆಯನ್ನುಸುತ್ತುಗಟ್ಟಿದರು. ನಂತರ ಹಳ್ಳಿಯ ಹೊರಗಿನ ಮೈದಾನಕ್ಕೆ ಆಕೆಯನ್ನು ಎತ್ತೊಯ್ದು,ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದರು.

ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಅಲ್ಲಿಂದ ಓಡಿದ ಆಕೆ, ಸಹಾಯ ಬೇಡುತ್ತಾ ಸುಮಾರು 1 ಕಿ.ಮೀ ಕ್ರಮಿಸಿದ್ದಾರೆ. ಹೀಗೆ ಬರುತ್ತಿದ್ದ ಸಂತ್ರಸ್ತೆಯನ್ನುರಸ್ತೆ ಬದಿಯಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬರು ನೋಡಿದ್ದಾರೆ.

‘ಸಹಾಯಕ್ಕಾಗಿ ಕೂಗಿಕೊಂಡು ಅವರುಬರುತ್ತಿದ್ದರು.ಹತ್ತಿರ ಬಂದಾಗಲೇ ತೀವ್ರವಾಗಿ ಸುಟ್ಟುಹೋಗಿರುವುದು ಕಾಣಿಸಿತು. ತಕ್ಷಣ 112ಕ್ಕೆ ಕರೆ ಮಾಡಿ ಕೊಟ್ಟೆ, ಅವರೇ ಮಾತನಾಡಿದರು. ಶೀಘ್ರ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು’ ಎಂದು ಪ್ರತ್ಯಕ್ಷದರ್ಶಿ ರವೀಂದ್ರ ತಿಳಿಸಿದರು.

ಇದನ್ನೂ ಓದಿ:ಬದುಕಿಸಿ, ಆರೋಪಿಗಳು ಗಲ್ಲಿಗೇರುವುದನ್ನು ನೋಡಬೇಕು: ಉನ್ನಾವ್ ಸಂತ್ರಸ್ತೆ ಕೊನೆಮಾತು

ಶೇಕಡ 90ರಷ್ಟು ಸುಟ್ಟ ಗಾಯಗಳಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಮೊದಲು ಲಖನೌದ ಶ್ಯಾಮ್ ಪ್ರಸಾದ್ ಮುಖರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಸಂಜೆ ಹೊತ್ತಿಗೆ ಏರ್ ಆಂಬುಲೆನ್ಸ್ ಮೂಲಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶುಕ್ರವಾರ ಸಂಜೆ ವೇಳೆಗೆ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಯಿತು. 48 ಗಂಟೆಗಳ ಜೀವನ್ಮರಣ ಹೋರಾಟದ ನಂತರರಾತ್ರಿ 11.40ಕ್ಕೆ ಹೃದಯಾಘಾತದಿಂದ ಸಂತ್ರಸ್ತೆ ಕೊನೆಯುಸಿರೆಳೆದರು.

ಕಳೆದ ಡಿಸೆಂಬರ್ನಲ್ಲಿ ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿತ್ತು. ಶಿವರಾಂ ತ್ರಿವೇದಿ ಮತ್ತು ಶುಭಂ ತ್ರಿವೇದಿ ಎಂಬ ಆರೋಪಿಗಳು ಈ ಕೃತ್ಯ ಎಸಗಿದ್ದರು. ಮಾರ್ಚ್ನಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.